Wednesday, January 28, 2026
27.9 C
Bengaluru
Google search engine
LIVE
ಮನೆ#Exclusive Newsಗೂಗಲ್ ಮ್ಯಾಪ್ ನೆಚ್ಚಿಕೊಳ್ಳುವ ಮುನ್ನ ಹುಷಾರ್ ....ಕಾದಿವೆ ಹಲವು ಅಪಾಯಗಳು

ಗೂಗಲ್ ಮ್ಯಾಪ್ ನೆಚ್ಚಿಕೊಳ್ಳುವ ಮುನ್ನ ಹುಷಾರ್ ….ಕಾದಿವೆ ಹಲವು ಅಪಾಯಗಳು

ನಮಗೆ ಅಪರಿಚಿತ ಊರುಗಳಿಗೆ ನಮ್ಮದೇ ವಾಹನದೊಂದಿಗೆ ಹೋದಾಗ ಸಾಮಾನ್ಯವಾಗಿ ಗೂಗಲ್ ಮ್ಯಾಪ್​ನ ಸಹಾಯ ತೆಗೆದುಕೊಳ್ಳುವುತ್ತೇವೆ. ಇದು ಸಹಜ ಹಾಗೂ  ಅನಿವಾರ್ಯ ಎಂಬಂತಹ ಸ್ಥಿತಿ ಸದ್ಯಕ್ಕೆ ಇದೆ. ಆದ್ರೆ ಒಂದೊಂದು ಸಾರಿ ಗೂಗಲ್ ಮ್ಯಾಪ್​ ನಮ್ಮನ್ನು ಅಪಾಯದ ಅಂಚಿಗೆ ತಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಅದೇ ಮಾದರಿಯ ಘಟನೆ ಉತ್ತರಪ್ರದೇಶದ ಮಥುರಾ-ಬರೇಲಿ ಹೆದ್ದಾರಿಯಲ್ಲಿ ನಡೆದಿದೆ.

ಮಥುರಾ-ಬರೇಲಿ ಹೆದ್ದಾರಿಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಗೂಗಲ್ ಮ್ಯಾಪ್​ನ ಸಹಾಯ ಪಡೆದು ಪ್ರಯಾಣ ಮಾಡುತ್ತಿದ್ದ ಇಬ್ಬರು ಗೆಳೆಯರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ರಸ್ತೆ ಇನ್ನೂ ಕೂಡ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿ ಇರಲಿಲ್ಲ. ಆದ್ರೆ ಅಮಾಯಕರು ಅದನ್ನೇ ನಂಬಿಕೊಂಡು ಕಾರ್​ನಲ್ಲಿ ಹೋದಾಗ ಒಂದು ಕಡೆ ಕಾಮಗಾರಿ ಸಂಪೂರ್ಣವಾಗದ ಕಡೆ ಇವರ ಕಾರು ಮಣ್ಣಿನಲ್ಲಿ ಮುಗುಚಿಕೊಂಡಿದೆ. ಕಾರ್​ನಲ್ಲಿದ್ದ ಇಬ್ಬರಿಗೂ ಕೂಡ ಗಾಯಗಳಾಗಿವೆ.

ಹೀಗೆ ಗೂಗಲ್ ಮ್ಯಾಪ್ ನಂಬಿ ಅಪಾಯಕ್ಕೆ ಸಿಲುಕಿದವರನ್ನು ವಿಮಲೇಶ್ ಶ್ರೀವಾತ್ಸವ್ ಮತ್ತು ಕುಶಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮಥುರಾ ಕಡೆಗೆ ಪ್ರಯಾಣ ಬೆಳೆಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹತ್ರಾಸ್​ ಜಂಕ್ಷನ್ ಬಳಿ ಈ ಒಂದು ಅಪಘಾತ ನಡೆದಿದೆ. ರಸ್ತೆಯ ಕಾಮಗಾರಿ ಇನ್ನೂ ಕೂಡ ನಡೆಯುತ್ತಿದ್ದು. ಅದರ ಬಗ್ಗ ಎಚ್ಚರಿಕೆಯ ಫಲಕ ಅಥವಾ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ಬೋರ್ಡ್​ ಕೂಡ ಅಲ್ಲಿ ಕಂಡು ಬಂದಿಲ್ಲ. ಹೀಗಾಗಿ ಕಾರು ಅಪಘಾತಕ್ಕೀಡಾಯಿತು ಎಂದು ವಿಮಲೇಶ್ ಹಾಗೂ ಕುಶಾಲ್ ಹೇಳಿದ್ದಾರೆ. ಅಪಘಾತಕ್ಕೆ ಒಳಗಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments