Wednesday, April 30, 2025
35.6 C
Bengaluru
LIVE
ಮನೆಟೆಕ್ ಲೈಫ್ಸ್ಟಾರ್ ಹೊಟೇಲ್ ನಲ್ಲಿ ಊಟ ತಿನ್ನುವ ಮುನ್ನ ಹುಷಾರ್..!

ಸ್ಟಾರ್ ಹೊಟೇಲ್ ನಲ್ಲಿ ಊಟ ತಿನ್ನುವ ಮುನ್ನ ಹುಷಾರ್..!

ಬೆಂಗಳೂರು : ಸ್ಟಾರ್ ಹೊಟೇಲ್ ಗಳಿಗೆ ಊಟ ಮಾಡಿ ಬರೋದು ಒಂದು ಪ್ರೆಸ್ಟೀಜ್.ಆದ್ರೆ ಇಂತಹ ಸ್ಟಾರ್ ಹೊಟೇಲ್ ಗಳಲ್ಲಿ ನೀಡುವ ಊಟದಲ್ಲಿ ಜಿರಲೆ ಸಿಕ್ಕರೆ ನಿಮಗೇ ಹೇಗಾಗಬೇಡ.. ಹೌದು ಇಂತಹದ್ದೆ ಪರಿಸ್ಥಿತಿ ವಕೀಲರೊಬ್ಬರಿಗೆ ಎದುರಾಗಿದೆ.

ಅಂದಾಗಿ ಈ ವಿಡಿಯೋ ನೋಡಿದರೆ ನೀವು ಕೂಡ ಅರೆಕ್ಷಣ ಶಾಕ್ ಆಗೋದು ಗ್ಯಾರಂಟಿ. ಇದನ್ನ ನೋಡಿದರೆ ಸ್ಟಾರ್ ಹೊಟೇಲ್ ಗಳಿಗೆ ಹೋಗಿ ಊಟ ಮಾಡುವುದನ್ನೇ ಬಿಟ್ಟುಬಿಡ್ತಿರೋ ಏನೋ..? ಪ್ರತಿಷ್ಟಿತ ಹೊಟೇಲ್ ಗಳು ನೀಟ್ ಅಂಡ್ ಕ್ಲೀನಾಗಿರ್ತಾವೆ ಅಂತ ನಂಬುವಂತಿಲ್ಲ..ಜಸ್ಟ್ ಅವರು ತಂದಿಡೋ ಊಟದ ತಟ್ಟೆ ಲೋಟ, ಇಂಟಿರಿಯರ್ ಡಿಸೈನ್ ರಿಚ್ ಆಗಿ ಇದ್ದಂತೆ, ಕಿಚನ್ ಇರುತ್ತಾ ನೋಡೋದೇ ಇಲ್ಲ..ಜಸ್ಟ್ ಮೆತ್ತನೆಯ ಸೀಟಿನ ಮೇಲೆ ಕುಳಿತು ವೇಟರ್ ಕೊಡೋ ಊಟ ತಿಂದ ಬಂದು ಬಿಡ್ತೀವಿ. ಆದ್ರೆ ಈ ಹೊಟೇಲ್ ಒಳಗೆ ಪಾತ್ರೆ ತೊಳೆದು ಎಷ್ಟು ದಿನಗಳಾಗಿರ್ತಾವೋ..? ಇಲಿ ಜಿರಲೆ ಪಲ್ಲಿಗಳು ಎಲ್ಲೆಲ್ಲಿ ಓಡಾಡಿ ಬಂದು ಬಿದ್ದಿರ್ತಾವೋ..ಗೊತ್ತಿರೋದೇ ಇಲ್ಲ.

ಹೌದು..ಊಟದ ತಟ್ಟೆಯಲ್ಲಿ ಜಿರಲೆ ಪತ್ತೆಯಾಗಿರೋದು ಬೆಂಗಳೂರಿನ ಪ್ರತಿಷ್ಟಿತ ಕ್ಯಾಪಿಟಲ್ ಹೊಟೇಲ್ ನಲ್ಲಿ.. ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಕ್ಯಾಪಿಟಲ್ ಹೋಟೆಲ್ಗೆ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ಹೋಗಿದ್ರು. ಹೋದವರೆ ಪನ್ನೀರ್ ಗ್ರೇವಿ ಮತ್ತು ರೋಟಿ ಆರ್ಡರ್ ಮಾಡಿದ್ದಾರೆ. ಚೆಂದದ ಪ್ಲೇಟಿನಲ್ಲಿ ಡಿಸೈನ್ ಆಗಿ ರೋಟಿ ಪನ್ನೀರ್ ಗ್ರೇವಿ ಬಂದಿದೆ. ಎರಡು ಗುಕ್ಕು ತಿನ್ನುತ್ತಲೇ ಗ್ರೇವಿಯಲ್ಲಿ ಕಾಣಿಸ್ತು ನೋಡಿ ಜಿರಳೆ..
ಜಿರಳೆ ಕಂಡು ಹೊಟೇಲ್ ಸಿಬ್ಬಂದಿಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ವಕೀಲೆಗೆ ಹೋಟೆಲ್ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ತಕ್ಷಣ ಕಿಚನ್ಗೆ ನುಗ್ಗಿದ ವಕೀಲೆ ವಿಡಿಯೋ ಮಾಡಿಕೊಂಡಿದ್ದಾರೆ. ಕಿಚನ್ ನೋಡಿದ್ರೆ, ವಾಕರಿಕೆ ಬರುವಂತಿದೆ. ಇದಕ್ಕಿಂತ ರಸ್ತೆ ಬದಿ ಬಡ ಹೊಟೇಲ್ ಗಳು ಎಷ್ಟೋ ಕ್ಲೀನಾಗಿರ್ತಾವೆ ಅಂತಾರೆ ವಕೀಲೆ ಶೀಲಾ.

ಇನ್ನು ಘಟನೆ ಸಂಬಂಧ ತಕ್ಷಣ ಫುಡ್ ಇನ್ಸೆಪೆಕ್ಟರ್ ಗೂ ಮಾಹಿತಿ ನೀಡಿದ್ದಾರೆ. ಆದ್ರೆ ಅವರು ನಿರ್ಲಕ್ಷ್ಯದ ಮಾತುಗಳನ್ನಾಡಿದ್ರು. ಈ ಆಡಿಯೋವನ್ನು ಕೂಡ ವಕೀಲರು ರೆಕಾರ್ಡ್ ಮಾಡಿಕೊಂಡು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments