Thursday, September 11, 2025
27.2 C
Bengaluru
Google search engine
LIVE
ಮನೆUncategorizedಬಿಬಿಎಂಪಿ ನಿರ್ವಹಣೆಗೆ 75 ಸಾವಿರ ಸಿಬ್ಬಂದಿ ಬೇಕು. ಬಿಬಿಎಂಪಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ಆಗ್ರಹ

ಬಿಬಿಎಂಪಿ ನಿರ್ವಹಣೆಗೆ 75 ಸಾವಿರ ಸಿಬ್ಬಂದಿ ಬೇಕು. ಬಿಬಿಎಂಪಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ಆಗ್ರಹ

ಬೆಂಗಳೂರು : ಬಿಬಿಎಂಪಿಯಲ್ಲಿ 7500 ಜನ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಮೂಲಭೂತ ಸೌಕರ್ಯ ಕೊಡುವುದ್ರಲ್ಲಿ ವಿಫಲವಾಗಿದೆ. ಎಂದು ಬಿಬಿಎಂಪಿ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ಹೇಳಿದ್ದಾರೆ.

300 ಕೋಟಿ ತೆರಿಗೆ ಹೆಚ್ಚಾಗಿ ಈ ವರ್ಷ ವಸೂಲಿ ಮಾಡಿದ್ದೇವೆ. ನೌಕರರಿಗೆ ಶೋಕಾಸ್ ನೋಟೀಸ್ ನೀಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ತೆರಿಗೆ ಸಂಗ್ರಹ ಮಾಡುತ್ತಿದ್ದೇವೆ. ಆದ್ರು ನಮ್ಮನ್ನು ಬಿಡದೇ ನೌಕರರಿಗೆ ಮಾನಸಿಕ ನೋವು ನೀಡುತ್ತಿದ್ದಾರೆ. ಈ ವರ್ತನೆ ನಿಲ್ಲಬೇಕು. ಜ್ಯೋತಿ ಲಕ್ಷ್ಮಿ ಎಂಬ ಅಧಿಕಾರಿಯನ್ನ ಅಮಾನತ್ತು ಮಾಡಿದ್ದಾರೆ ಎಂದರು.

ಇನ್ನು, ಬಿಬಿಎಂಪಿ ನಿರ್ವಹಣೆಗೆ 75 ಸಾವಿರ ಸಿಬ್ಬಂದಿ ಬೇಕು. ನಮ್ಮಲ್ಲಿ 7200 ಸಿಬ್ಬಂದಿಗಳಿದ್ದೇವೆ.  ಮುಂಬೈಯಲ್ಲಿ ಎರಡುವರೆ ಕೋಟಿ ಇರುವ ಜನಸಂಖ್ಯೆಗೆ 90 ಸಾವಿರ ಅಧಿಕಾರಿಗಳಿದ್ದಾರೆ. ಮುಖ್ಯ ಆಯುಕ್ತರು ಹಾಗೂ ಉಪಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸಬೇಕು. ಮಧ್ಯಾಹ್ನ 12 ಗಂಟೆಗೆ ಮುಖ್ಯ ಆಯುಕ್ತರು ಬರ್ತಾರೆ. ಅವರು ಬಂದು ಯಾವ ಬೇಡಿಕೆ ಈಡೇರಿಸುತ್ತಾರೆ ಅನ್ನೋದನ್ನ ನೋಡಿ ಮುಂದಿನ ನಿರ್ಧಾರದ ಬಗ್ಗೆ ತಿಳಿಸುತ್ತೇವೆ‌ ಎಂದು ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments