Freedom TVTop Newsಸುದ್ದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ತನ್ನ ಆಯುವ್ಯದಲ್ಲಿ ಮಧ್ಯರಾತ್ರಿ ಎಲ್ಲಾ ಮಾದರಿಯ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಾಗಿ ಘೋಷಣೆ ಮಾಡಿತ್ತು. ಇದರಂತೆ ಬೆಂಗಳೂರಿನ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಇಂದು ಮಧ್ಯರಾತ್ರಿಯಿಂದ ವಿಸ್ತರಿಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ನೈಟ್​ ಲೈಫ್​ ಮತ್ತಷ್ಟು ತೆರೆದುಕೊಳ್ಳಲಿದ್ದು ಮಾಲ್​ಗಳು, ಸೂಪರ್​ ಮಾರ್ಕೆಟ್​, ಬಟ್ಟೆ ಮಳಿಗೆ, ದಿನಸಿ ಒಳಗೊಂಡಂತೆ ರಾತ್ರಿ 1 ಘಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ. ಸರ್ಕಾರದ ಈ ನಿರ್ಧಾರದಿಂದಾಗಿ ರೈಲು, ಬಸ್ಸು, ವಿಮಾನ ಪ್ರಯಾಣಿಕರುಗಳಿಗೆ ಅನುಕೂಲವಾಗಲಿದ್ದು ತೆರಿಗೆ ಸಂಗ್ರಹವೂ ಕೂಡ ಹೆಚ್ಚಾಗಲಿದೆ. ಉದ್ಯೋಗ ಅವಕಾಶ ಹೆಚ್ಚುವುದರ ಜೊತೆಗೆ ಕಾನೂನು ಸುವ್ಯವಸ್ಥೆ & ಪೊಲೀಸ್​ ಗಸ್ತು ಕೂಡ ಹೆಚ್ಚಾಗಲಿದೆ.

ಬೆಂಗಳೂರು ಹೋಟೆಲ್​ ಮಾಲೀಕರ ಸಂಘ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು ರಾತ್ರಿ 1 ಘಂಟೆಯವರಿಗೆ ಬಿಬಿಎಂಪಿ ವ್ಯಾಪ್ತಿಯ ಬಾರ್​ಗಳು ತೆರೆಯುವುದರಿಂದ ಅಂಗಡಿಗಳು & ಹೋಟೆಲ್​ಗಳ ಸಿಬ್ಬಂದಿಗಳೂ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button