ಹುಬ್ಬಳ್ಳಿ : ಭ್ರೂಣ ಹತ್ಯೆ ಇಂದಿಗೂ ನಿರಂತರವಾಗಿದೆ ಎಂದು ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ. CID ಗೆ ಹಸ್ತಾರಂತ ಮಾಡಿದ್ರೆ ಏನು ಉಪಯೋಗ..? ಸಿಐಡಿಗೆ ಕೊಟ್ರೆ ಯಾರಿಗೆ ಭಯ ಇದೆ, ಇವತ್ತಿಗೂ ಭ್ರೂಣ ಹತ್ಯೆ ನಡೀತಿದೆ ಎಂದು ಬಸವರಾಜು ಬೊಮ್ಮಾಯಿ ಹೇಳಿದರು.
ಮಹಿಳೆ ವಿಸೃತಗೊಳಿಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಕೋಲಾರದ ಘಟನೆ ಅತ್ಯಂತ ಅಮಾನವೀಯ ಕೃತ್ಯ. ಈ ಭಾಗದಲ್ಲಿ ಪದೇ ಪದೇ ಘಟನೆ ಆಗುತ್ತೆ. ಘಟನೆ ಆದ ಮೇಲೆ ಅಮಾನತ್ತು ಮಾಡಿದ್ರೆ ಏನ ಉಪಯೋಗ..? ಎಲ್ಲ ಮುಗಿಸಿ ಅಮಾನತು ಮಾಡೋದರಲ್ಲಿ ಏನೂ ಶೂರತ್ವ ಇಲ್ಲ. ಮಹಾದೇವಪ್ಪನವರೇ ನಿಮ್ಮ ಪೌರುಷ ಅಮಾನತ್ತು ಮಾಡೋದರಲ್ಲಿ ಅಲ್ಲ, ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳೋದು ನಿಮ್ಮ ಆಡಳಿತ ಧಕ್ಷತೆ ಎಂದರು.
ಬೆಳಗಾವಿ ಘಟನೆ ಅಧಿವೇಶನ ನಡೆಯೋವಾಗಲೇ ಈ ರೀತಿ ಘಟನೆ ನಡದಿದೆ. ಕಳ್ಳರು ಕಾಕರಿಗೆ ಭಯ ಇಲ್ಲ ಅನಿಸುತ್ತೆ. ರಾಜ್ಯದಲ್ಲಿ ಲಾ ಆ್ಯಂಡ್ ಆರ್ಡರ್ ಇಲ್ಲ. ಜನ ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ. ಇನ್ನೂ ಜನರ ಬದುಕು ದುಸ್ಥರ ಆಗಿದೆ. ಅಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ. ಇದಕ್ಕೆಲ್ಲ ಕಾರಣ ಟ್ರಾನ್ಸಫರ್ ಕಾರಣ. ಇವರು ಟ್ರಾನ್ಸಫರ್‌ನಲ್ಲಿ ದುಡ್ಡು ತಿಂದಿದ್ದಾರೆ. ಸರ್ಕಾರ ಟ್ರಾನ್ಸಫರ್ ಗೆ ಟಾರ್ಗೆಟ್ ಫಿಕ್ಸ್ ಮಾಡಿದರು. ಅಧಿಕಾರಿಗಳು ಯೋಜನೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡ್ತರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಅನಿಸ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.