ಮೈಸೂರು ದಸರಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ್ದು, ಬಾನು ಮುಷ್ತಾಕ್ ಅವರು ಭಾಷಣ ಮಾಡಿರುವ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..
ಜನ ಸಾಹಿತ್ಯ ಸಮ್ಮೇಳನ -2023ರಲ್ಲಿ ಬಾನು ಮುಷ್ತಾಕ್ ರವರು ಮಾಡಿರುವ ಭಾಷಣ ಮಾಡಿದ್ದು,ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. ಕೆಂಪು ಮತ್ತು ಹಳದಿ, ಅರಿಶಿನ-ಕುಂಕುಮದ ಬಾವುಟ ಹಾಕಿದ್ದೀರಿ. ಅರಿಶಿನ-ಕುಂಕುಮದ ಲೇಪಿಸಿ ಭುವನೇಶ್ವರಿಯಾಗಿ ಕೂರಿಸಿ ಬಿಟ್ಟಿರಿ. ನಾನೆಲ್ಲಿ ನಿಲ್ಲಬೇಕು. ನಾನೇನನ್ನು ನೋಡಲಿ. ನಾನೆಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಟ್ಟವಿಕೆ ಇಂದಿನಿಂದಲ್ಲ, ಎಂದಿನಿಂದಲೋ ಆರಂಭವಾಗಿತ್ತು. ಆದರೆ, ಇಂದು ಪೂರ್ಣಗೊಂಡಿದೆಯಷ್ಟೇ ಎಂದು ಹೇಳಿಉವ ವಿಡಿಯೋ ವೈರಲ್ ಆಗಿದೆ..
ಈ ವಿಡಿಯೋ ಮಾಜಿ ಸಂಸದ ಪ್ರತಾಪ್ ಸಿಂಹ ಹಂಚಿಕೊಂಡು ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಬೂಕರ್ ಬಾನು, ತಾಯಿ ಚಾಮುಂಡಿಯನ್ನು ನಾಡದೇವಿಯಾಗಿ ಒಪ್ಪಿ ಪುಷ್ಪಾರ್ಚನೆ ಮಾಡಿಯಾರೆ. ಕನ್ನಡ ಭುವನೇಶ್ವರಿ ಸಹಿಸದವರು ಚಾಮುಂಡಿಗೆ ತಲೆಬಾಗಲು ಒಪ್ಪಿದ್ದಾದರೂ ಏಕೆ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.. ಇನ್ನು ಇದೇ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರೂ ಹಂಚಿಕೊಂಡಿದ್ದು, ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.