
ಮೈಸೂರು: ನಾಡಹಬ್ಬ ದಸರಾಗೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆಗೂ ಮುನ್ನ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ್ರು, ಬಳಿಕ ಮಾತನಾಡಿದ ಅವರು, ದಸರಾ ಉದ್ಟಾಟನೆಗೂ ಮುನ್ನ ಒಂದಷ್ಟು ವಿರೋಧಗಳು ವ್ಯಕ್ತವಾದ್ರೂ ನನ್ನನ್ನ ಈ ತಾಯಿ ಕರೆಸಿಕೊಂಡಿದ್ದಾಳೆ.
ದಸರಾ ಉತ್ಸವದ ಉದ್ಘಾಟನೆಯನ್ನ ತಾಯಿ ಚಾಮುಂಡೇಶ್ವರಿ ಕೃಪಾಶೀರ್ವಾದದಿಂದ ಉದ್ಘಾಟನೆ ಮಾಡಿದ್ದೇವೆ. ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ರು. ಆದ್ರೆ ತಾಯಿ ಚಾಮುಂಡೇಶ್ವರಿ ನನ್ನ ಈ ರೀತಿ ಕರೆಸಿಕೊಳ್ಳುತ್ತಿದ್ದಾಳೆ. ಒಂದಷ್ಟು ವಿರೋಧಗಳು ವ್ಯಕ್ತ ಆದ್ರೂ ನನ್ನನ್ನ ತಾಯಿ ಕರೆಸಿಕೊಂಡಿದ್ದಾಳೆ. ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ ನಾನು ನಿಮ್ಮೆದುರು ನಿಂತಿದ್ದೇನೆ.ಇದು ಜೀವನದ ಅತ್ಯಂತ ಗೌರವದ ಸಂಗತಿ ಎಂದು ಬಾನು ಮುಷ್ತಾಕ್ ಹೇಳಿದ್ರು.
ಮಹಾರಾಜರು ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಅವರನ್ನ ನಂಬಿದ್ರು. ಅವರ ಅಂಗಪಡೆಯ ಸದಸ್ಯರನ್ನಾಗಿ ಮಾಡಿಕೊಂಡಿದ್ದರು. ನನ್ನ ಧಾರ್ಮಿಕ ನಂಬಿಕೆಗಳು ಮಾನವೀಯ ದರ್ಶನಗಳನ್ನು ಕಲಿಸಿದೆ. ಎಲ್ಲರನ್ನು ಗೌರವವಿಸುದನ್ನು ಕಳಿಸಿದೆ. ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಎಲ್ಲರನ್ನೂ ಗೌರವಿಸೋಣ.
ಈ ನೆಲದ ಹೂವುಗಳು ಐಕ್ಯತೆಯಿಂದ ಕೂಡಿರಲಿ. ನಮ್ಮೊಳಗಿನ ದ್ವೇಷ ಅಸಹಿಷ್ಣತೆ ಎಲ್ಲವನ್ನೂ ಹೋಗಿಸಲಿ. ಇಡೀ ಜಗತ್ತಿನ ಮಾನವನ ಕುಲಕ್ಕೆ ಶಾಂತಿ ಸಹನೆ ನ್ಯಾಯದ ದೀಪ ಬೆಳಗಿಸಲಿ. ಇಲ್ಲಿ ಬೆಳಗಿದ ದೀಪ ಜಗತ್ತನ್ನು ಬೆಳಗಲಿ. ಈ ನೆಲದ ಪರಂಪರೆ ಇದು ಸರ್ವಜನಾಂಗದ ಶಾಂತಿಯ ತೋಟದ ಅಂತ ಹೇಳುತ್ತೆ. ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ. ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ. ನಾವೆಲ್ಲರೂ ಒಂದೇ ಗಗನದ ಪಯಣಿಕರು. ಭೂಮಿ ಯಾರನ್ನು ಹೊರ ತಳ್ಳಲ್ಲ.ಮನುಷ್ಯ ಮಾತ್ರ ಗಡಿ ಹಾಕುತ್ತಾನೆ. ಇದನ್ನು ನಾವೇ ಅಳಿಸಬೇಕು ಎಂದು ಹೇಳಿದ್ದಾರೆ..




