Tuesday, January 27, 2026
24 C
Bengaluru
Google search engine
LIVE
ಮನೆUncategorizedಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್: ಕೃತ್ಯದ ಹಿಂದೆ ಟೀಮ್ ವರ್ಕ್

ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್: ಕೃತ್ಯದ ಹಿಂದೆ ಟೀಮ್ ವರ್ಕ್

ಬೆಂಗಳೂರು : ಬೆಂಗಳೂರಿನ ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿರುವ ಪ್ರತಿಷ್ಟಿತ ರಾಮೇಶ್ವರಂ ಕೆಫೆ ಬ್ಲಾಸ್ಟ್ ಹಿಂದೆ ಕೇವಲ ಒಬ್ಬನ ಪಾತ್ರವಲ್ಲ, ಒಂದು ತಂಡವೇ ಕೆಲಸ ಮಾಡಿದೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಬ್ಲಾಸ್ಟ್ಗೆ ಮುನ್ನ ಬಿಎಂಟಿಸಿ ಬಸ್ಸಿನಿಂದ ಬಂದಿಳಿದಿರುವ ಶಂಕಿತ ಮೊಬೈಲ್ ಬಳಸದೆ ತಲೆಗೆ ಕ್ಯಾಪ್ ಹಾಕಿಕೊಂಡು ಓಡಾಡಿದ್ದಾನೆ. ಆತನ ಮುಖಚಹರೆ ಸಿಸಿಟಿವಿಯಲ್ಲಿ ಎಲ್ಲೂ ಕೂಡ ರಿಜಿಸ್ಟರ್ ಆಗದಂತೆ ಎಚ್ಚರಿಕೆ ವಹಿಸಿದ್ದಾನೆ. ಶಂಕಿತ ಓಡಾಡಿರುವ ಹಾದಿಯ ಸುಮಾರು 300 ಸಿಸಿಟಿವಿಗಳನ್ನ ಪರಿಶೀಲನೆ ಮಾಡಲಾಗಿದೆ.

ಇನ್ನು ಹೊಟೇಲ್ಗೆ ಬರುವಾಗ ಮತ್ತು ಹೋಗುವಾಗ ಅವನು ಫುಟ್ ಪಾತ್ ಬಳಸದೆ ರಸ್ತೆ ಮಧ್ಯೆ ಅಡ್ಡಾದಿಡ್ಡಿ ನಡೆದುಕೊಂಡು ಕ್ಯಾಮರಾಗೆ ಮುಖ ಮರೆಮಾಡಿಕೊಂಡು ಓಡಾಡಿದ್ದಾನೆ. ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಧರಿಸಿ, ಬ್ಲಾಕ್ ಕಲರ್ ಬ್ಯಾಗ್ ಹಿಡಿದು ಓಡಾಡಿರೋದು ಸಿಸಿಟಿವಿ ಕ್ಯಾಮರಾದಲ್ಲಿ ರಿಜಿಸ್ಟರ್ ಆಗಿದೆ. ಇನ್ನು ಕೃತ್ಯಕ್ಕೆ ಅಂತಲೇ ಪಕ್ಕಾ ಪ್ಲ್ಯಾನ್ ಮಾಡಿದ್ದು, ಶಂಕಿತ ಹೋಟೆಲ್ಗೆ ಎಂಟ್ರಿ ಕೊಟ್ಟು ಟೈಮರ್ ಬಾಂಬ್ ಫಿಕ್ಸ್ ಮಾಡಿ ಬ್ಯಾಗ್ ಇಟ್ಟು ಹೋಗಿದ್ದಾನೆ. ಕೃತ್ಯದ ಹಿಂದೆ ಕೇವಲ ಒಬ್ಬನ ಕೈವಾಡವಲ್ಲದೆ ಒಂದು ಟೀಮ್ ವರ್ಕ್ ಮಾಡಿದೆ ಎಂಬ ಅನುಮಾನ ಪೊಲೀಸರದ್ದು. ಹೀಗಾಗಿ ಪೊಲೀಸ್ರು ನಾನಾ ಆಂಗಲ್ ಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments