ಬೆಂಗಳೂರು: ವ್ಯಕ್ತಿಯೋರ್ವ ಚಪ್ಪಲಿ ಕಾಲಿನಲ್ಲಿ ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹವನ್ನು ಎಳೆದಾಡಿರುವ ಘಟನೆ ನಡೆದಿದೆ..
ನಿನ್ನೆ ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳೀಯರು ಆರೋಪಿಯನ್ನು ಹಿಡಿದು ಧಳಿಸಿ ಮಾರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.. ಈತ ಬಾಂಗ್ಲಾ ಮೂಲದ ಕಬೀರ್ ಎಂಬಾತ ದೇವರ ಬೀಸನಹಳ್ಳಿಯಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ನಡೆಸುತ್ತಿದ್ದ.
ಆತ ವಿಶೇಷ ಚೇತನನೆಂದು ಹೇಳಲಾಗಿದ್ದು, ತಾನು ಬಾಂಗ್ಲಾದೇಶದಿಂದ ಬಂದವನೆಂದು ಸ್ಥಳೀಯರ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ಘಟನೆಯ ದಿನ, ಕಬೀರ್ ತನ್ನ ಧರ್ಮದ ಪರ ಘೋಷಣೆ ಕೂಗುತ್ತಾ ದೇವಸ್ಥಾನದ ಬಳಿ ಮೆಡಿಕಲ್ ಅಂಗಡಿಯ ಮುಂದೆ ಇರಿಸಿದ್ದ ಗಣಪತಿ ದೇವರ ಫೋಟೊಗೆ ಕೋಲಿನಿಂದ ಹೊಡೆದಿದ್ದ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ, ಆತ ಸಮೀಪದ ದೇವಸ್ಥಾನದತ್ತ ಓಡಿದ್ದಾನೆ.
ಇನ್ನು ಕುಡಿದ ಅಮಲಿನಲ್ಲಿ ವಿಗ್ರಹ ಭಗ್ನಗೊಳಿಸಿದ್ದಾನೆ ಆರೋಪಿ ಕಬೀರ್ ಮಂಡಲ್ ಅಕ್ರಮವಾಗಿ ಭಾರತಕ್ಕೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆಸಾಮಿ, ಪಶ್ಚಿಮ ಬಂಗಾಳ ಮೂಲಕವಾಗಿ ನಗರಕ್ಕೆ ಎಂಟ್ರಿಕೊಟ್ಟಿದ್ದ ಎನ್ನಲಾಗ್ತಿದೆ. ಈ ಬಗ್ಗೆ ಪೊಲೀಸರು ದಾಖಲಾತಿಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.


