ಕ್ರೈಂ ಸ್ಟೋರಿರಾಜಕೀಯರಾಜ್ಯಸುದ್ದಿ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ  ಪ್ರಜೆಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಸಿದ್ಧಿಕ್ (55) ಬಂಧಿತನಾದ ಬಾಂಗ್ಲಾದೇಶ ಪ್ರಜೆ ಎಂದು ಗುರುತಿಸಲಾಗಿದೆ.  ಮೊಹಮ್ಮದ್ ಸಿದ್ಧಿಕ್ 2006ರಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದನು ಎಂದು ತಿಳಿದುಬಂದಿದೆ.

2006ರಲ್ಲಿ ಮೊಹಮ್ಮದ್ ಸಿದ್ದಿಕ್ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿದ್ದನು. ಬೆಂಗಳೂರಿನ ಕಾಡುಗೋಡಿಯ ದೊಡ್ಡಬನಹಳ್ಳಿ ಬಳಿ ವಾಸವಿದ್ದನು. ಇಲ್ಲಿ, ನಕಲಿ ವರ್ಗಾವಣೆ ಪತ್ರದ ಮೂಲಕ ಭಾರತದ ಪಾಸ್​ಪೋರ್ಟ್, ವೋಟರ್​ಐಡಿ, ಪಾನ್ ಕಾರ್ಡ್ ಪಡೆದಿದ್ದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಮೊಹಮ್ಮದ್ ಸಿದ್ಧಿಕ್ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಫಾರಿನರ್ಸ್ ಆಕ್ಟ್, BNS 336(3), 340(2), 339ರಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೊಹಮ್ಮದ್ ಸಿದ್ದಿಕ್​ನನ್ನು ಪೋಲಿಸರು ವಿಚಾರಣೆ ನಡೆಸಿದ್ದಾರೆ.  ಈ ವೇಳೆ ಮೊಹಮ್ಮದ್ ಸಿದ್ದಿಕ್ ಬೆಂಗಳೂರಿನ ಥಣಿಸಂದ್ರದ ವ್ಯಕ್ತಿಯೊಬ್ಬ ಭಾರತದ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದಾನೆಂದು ಬಾಯ್ಬಿಟ್ಟಿದ್ದಾನೆ.

ಇನ್ನು ಮೊಹಮ್ಮದ್ ಸಿದ್ದಿಕ್ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ಬಾಂಗ್ಲಾ ವಲಸಿಗರಿಂದ ಹಣ ಪಡೆದುಕೊಂಡು, ಭಾರತೀಯ ದಾಖಲಾತಿಗಳಾದ ಪಾಸ್​ಪೋರ್ಟ್​, ಪ್ಯಾನ್​ಕಾರ್ಡ್​ಗಳನ್ನು ಮಾಡಿಸಿಕೊಂಡಿದ್ದಾನೆ. ಈತನ ಜೊತೆಗೆ ಇನ್ನೂ 15-20 ಬಾಂಗ್ಲಾ ವಲಸಿಗರು ಜನ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು  ಎಫ್​ಐಆರ್​ನಲ್ಲಿ ದಾಖಲಾಗಿದೆ.

Comments (0)

Your email address will not be published. Required fields are marked *

Back to top button