ಬೆಂಗಳೂರು: ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಅಂತರರಾಜ್ಯ ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್, ಪತ್ನಿ ಮುಬೀನಾ ಹಾಗೂ ಸೋನು ಯಾದವ್ ಬಂಧಿತ ಆರೋಪಿಗಳು ಈ ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಬಳಿಕ ಮನೆ ಕಳ್ಳತನ ಮಾಡುತ್ತಿದ್ದವರು ಕೊನೆಗೂ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತ ಆರೋಪಿಗಳಿಂದ ಸುಮಾರು 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಕರ್ನಾಟಕಕ್ಕೆ ಎಂಟ್ರಿಕೊಟ್ಟಿದ್ದ ಆರೋಪಿಗಳು ಅಂದರ್ !
ಇದೇ ವರ್ಷ ಮೇ 10ರಂದು ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಭಾಗ್ಯವತಿ ಜೆ.ಬಂಟ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ವೇಳೆ ಕಳುವಾಗಿದ್ದ ಮನೆಯ ಸುತ್ತಮುತ್ತಲಿನ ಕಟ್ಟಡಗಳಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಪೊಲೀಸರಿಗೆ ಕಳ್ಳರ ಸುಳಿವು ಸಿಕ್ಕಿತ್ತು. ಆಗ ಆರೋಪಿಗಳ ಬೆನ್ನು ಬಿದ್ದ ಪೊಲೀಸರ ಕೈಗೆ ಓರ್ವ ಆರೋಪಿ ಸೋನು ಯಾದವ್ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಕ್ಕಿ ಬೀದ್ದನು. ಬಳಿಕ ಆತನನ್ನು ವಿಚಾರಿಸಿದಾಗ ಅಸಲಿ ಸತ್ಯ ಬಾಯಿಬಿಟ್ಟದ್ದಾನೆ. ಸೋನು ಕೊಟ್ಟ ಸುಳುವಿನ ಜಾಡುಬಹಿಡಿದು ತನಿಖಾ ತಂಡವು ದೆಹಲಿಗೆ ಹಾರಿದ್ದರು. ಇನ್ನು ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರೆ. ಈ ವೇಳೆ ಅಕ್ಬರ್ ಮತ್ತು ಮುಬೀನಾಳನ್ನು ಬಂಧಿಸುತ್ತಾರೆ. ಗಾಜಿಯಾಬಾದ್ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಇನ್ನು ಬಂಧಿತ ಮೂವರು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ ಈ ಆರೋಪಿಗಳು 2014ರಲ್ಲಿ ಬೆಂಗಳೂರಿನ ಆಶೋಕನಗರ ಠಾಣೆ ವ್ಯಾಪ್ತಿ, 2020ರಲ್ಲಿ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿ ಸಿಕ್ಕಿಬಿದಿದ್ದರು. ಬಳಿಕ ಬೇಲ್ ಮೇಲೆ ತೆರಳಿದ ಈ ಆರೋಪಿಗಳು ನಾಲ್ಕು ವರ್ಷಗಳ ಕಾಲ ರಾಜ್ಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ ಇದೀಗ ಕಳೆದ ಮೇ ತಿಂಗಳಲ್ಲಿ ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಮಾಡಿ ಮತ್ತೆ ಅಂದರ್ ಆಗಿ ಸದ್ಯ ಪರಪ್ಪನ ಅಗ್ರಹಾರ ಜೈಲ್ ಸೇರಿದ್ದಾರೆ.
ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದೆ ರಣ ರೋಚಕ.!
ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಟ್ರೈನ್ ಹಿಡಿದು ಎಸ್ಕೇಪ್ ಆಗಿದ್ದ ಆರೋಪಿ ದಂಪತಿಗಳಾದ ಅಕ್ಬರ್ ಹಾಗೂ ಮುಬೀನಾ ಅದೃಷ್ಟ ಕೆಟ್ಟಿದ್ದರಿಂದ ಮತ್ತೊಬ್ಬ ಆರೋಪಿ ಸೋನೂ ಯಾದವ್ ಕೈಗೆ 25 ಸಾವಿರ ನೀಡಿ ಬೆಂಗಳೂರಿನಲ್ಲೇ ಬಿಟ್ಟು ಹೋಗಿದ್ದರು. ಆತ ಒಂದು ಲೆಕ್ಕದಲ್ಲಿ ಪೊಲೀಸರ ಕೈಗೆ ಸುಲಭವಾಗಿಯೇ ಸಿಕ್ಕಿಬಿದ್ದ ಆದ್ರೆ ಅಕ್ಬರ್ ಮತ್ತು ಮುಬೀನಾ ಮಾತ್ರ ಅಷ್ಟು ಸುಲಭವಾಗಿ ಖಾಕಿ ಕೈಗೆ ತಗ್ಲಾಕೊಂಡಿಲ್ಲ ತಿಂಗಳು ಗಟ್ಟಲೇ ದೆಹಲಿಯ ಬೀದಿ ಬೀದಿಗಳಲ್ಲಿ ಪೊಲೀಸರು ಮಾರ್ಚ್ ಫಾಸ್ಟ್ ಮಾಡಬೇಕಾಯ್ತು.
ಒಂದು ಫೋನ್ ಕಾಲ್ ಮಾಡಲು ಒಂದು ಸಿಮ್ ಅಷ್ಟೇ ಬಳಸ್ತಿದ್ದ ಆರೋಪಿಗಳು; ವಿಳಾಸ ತೋರಿಸಿದ್ದೇ ಮಕ್ಕಳ ಶಾಲೆಯ ಸ್ಯಾಟ್ ಮಾಹಿತಿ.!
ಅಂತರರಾಜ್ಯ ಕಳ್ಳರಾದ ಅಕ್ಬರ್ ಮತ್ತು ಮುಬೀನಾ ಮನೆ ಕಳವು ಕೆಲಸ ಮಾಡ್ತಿದ್ರು, ಮಕ್ಕಳನ್ನು ಮಾತ್ರ ಸ್ಟಾಂಡರ್ಡ್ ಶಾಲೆಗಳಲ್ಲಿ ಓದಿಸುತ್ತಿದ್ದರು. ಇನ್ನು ಆರೋಪಿ ಸೋನು ಯಾದವ್ ಕೊಟ್ಟ ಮಾಹಿತಿ ಹಿಡಿದು ಹೊರಟ ಪೊಲೀಸರಿಗೆ ಅಕ್ಬರ್ ಸುಳಿವು ಸಿಕ್ಕಿರಲಿ, ಆದ್ರೆ ಅವರ ಮಕ್ಕಳು ಓದುತಿದ್ದ ಶಾಲೆಗೆ ಹೋದ ಪೊಲೀಸರಿಗೆ ಅಲ್ಲಿನ ಪ್ರಿನ್ಸಿಪಾಲ್ ಬಳಿ ಮನವಿ ಮಾಡಿದಾಗ ಮಕ್ಕಳ ಸ್ಯಾಟ್ ಮಾಹಿತಿ ಓಪನ್ ಮಾಡಿದಾಗ ಆರೋಪಿಗಳ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಆಗ ಪೊಲೀಸರು ಅದರ ಆಧಾರದ ಮೇಲೆ ಆರೋಪಿಯ ಮನೆ ಪತ್ತೆ ಹಚ್ಚಿದ್ರು. ಸುಮಾರು ಮೂರು ನಾಲ್ಕು ದಿನಗಳ ಕಾಲ ಹೊಂಚು ಹಾಕಿ ಕುಳ್ತಿದ್ದ ಪೊಲೀಸರು ಸ್ಥಳೀಯ ಪೊಲೀಸರ ಸಹಾಯಪಡೆದು ವಶಕ್ಕೆ ಪಡೆದುಕೊಂಡು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿ ಬಳಿಕ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿ ಬಳಿಕ ಕಳವು ಮಾಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.