ಬೆಂಗಳೂರು: ಜೈಲಿನಲ್ಲಿ ವಿಡಿಯೋ ಕಾಲ್ ಮಾಡಿ ಮಾತಡಿದ್ದ ದರ್ಶನ್, ಧರ್ಮ ಹಾಗೂ ಸತ್ಯನನ್ನ ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ದರ್ಶನ್ ನಗಗೆ ಗೊತ್ತಿಲ್ಲದೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದೆ. ಆಗಸ್ಟ್ 2 ರಂದು ಈ ಘಟನೆ ಆಗಿದ್ದು, ಆ ದಿನ ಧರ್ಮನ ಬರ್ತಡೇ ಇತ್ತು. ನಾನು ವಾಕಿಂಗ್ ಹೋಗುವಾ ಧರ್ಮ ಜೈಲಿನ ರೂಮ್ ನಂಬರ್ 1ಕ್ಕೆ ನನ್ನನ್ನ ಕರೆದು ವಿಶ್ ಮಾಡೋಕೆ ಅಂತ ಹೋಗಿದ್ದೆ. ಆ ವೇಳೆ ಸಡನ್ ಆಗಿ ನಿಮ್ಮ ಫ್ಯಾನ್ ಅಣ್ಣ ಅಂತ ಹೇಳಿ ಮೊಬೈಲ್ ತೋರಿಸಿದರು. ನಾನು ಸಡನ್ ಆಗಿ ಏನು ಮಾಡಬೇಕು ಅಂತ ಗೊತ್ತಾಗದೆ ಹಾಯ್ ಹೇಳಿ ಊಟ ಆಯ್ತಾ ಅಂತ ಕೇಳಿದೆ ಅಷ್ಟೆ.
ಇದಾದ ನಂತರ ಧರ್ಮನಿಗೆ ನಾನೇ ಬೈದಿದ್ದೇನೆ. ಮೊಬೈಲ್ ಯಾರು ಕೊಟ್ಟಿದ್ದು, ಯಾಕೆ ವಿಡಿಯೋ ಕಾಲ್ ಮಾಡಿದೆ ಅಂತ ಬೈದಿರೋದಾಗಿ ದರ್ಶನ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಧರ್ಮ ಕೂಡ ಇದೇ ರೀತಿ ಹೇಳಿಕೇ ನೀಡಿದ್ದಾನೆ. ಇದೇ ರೀತಿ ಧರ್ಮಕೂಡ ಹೇಳಿಕೆ ನೀಡಿದ್ದು.
ಸದ್ಯ ರೂಮ್ 1ರಲ್ಲಿ ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ. ಒಟ್ಟಿನಲ್ಲಿ ಬರ್ತಡೇ ವಿಶ್ ಮಾಡೋದಕ್ಕೆ ಹೋಗಿ ನಟ ದರ್ಶನ್ ತನ್ನ ಸಹಚರನನ್ನ ಬಿಟ್ಟು ಒಂಟಿಯಾಗೋ ಪರಿಸ್ಥಿತಿ ಎದುರಾಗಿದೆ.