ಬೆಂಗಳೂರು : ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ನಾನಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ನಗರದ ನಾನಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ವೈಯಾಲಿಕಾವಲ್ ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ತುಂಬಾ ವಿಶಿಷ್ಟವಾಗಿ ಆಚರಿಸಲಾಯಿತು. ದೇವಾಲಯದ ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಸಿದ್ದು, ಭಕ್ತಾಧಿಗಳು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು.
ವೈಕುಂಠ ಏಕಾದಶಿಯು ಹಿಂದೂ ಆಚರಣೆಯಲ್ಲಿ ಪವಿತ್ರವಾದ ದಿನವಾಗಿದೆ. ಈ ದಿನದಂದದು ಭಗವಾನ್ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ತಿರುಪತಿ ತಿರುಮಲ ದೇಗುಲದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪಾರಾಯಣ, ಪ್ರಸಾದ ವಿತರಣೆ, ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ದಿನ ಭಕ್ತರು ಉಪವಾಸ ಮಾಡಿ, ವಿಷ್ಣುವಿನ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ.
ವೈಯಾಲಿಕಾವಲ್ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹಿರಿಯ ನಾಗರಿಕರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ವಿಶೇಷಚೇತನರಿಗೆ ಆಧಾರ್ ಕಾರ್ಡ್ ತೋರಿಸಿ ಒಳಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮುಜರಾಯಿ ಮತ್ತು ಟ್ರಸ್ಟ್ ಆಧಾರಿತ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ಸರದಿ ಸಾಲಿನಲ್ಲಿ ನಿಲ್ಲಿಸದೇ ನೇರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.
ಅದೃಷ್ಟ, ಸಮೃದ್ಧಿ ಹಾಗೂ ಸಂತೋಷದ ಸಂಕೇತನಾಗಿರುವ ವಿಷ್ಣುವನ್ನು ಆರಾಧಿಸಲು ವೈಕುಂಠ ಏಕಾದಶಿಯು ಮಹತ್ವದ ದಿನವಾಗಿದೆ. ಶ್ರದ್ಧೆ ಹಾಗೂ ಭಕ್ತಯಿಂದ ಉಪವಾಸ ನಡೆಸಿ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದವರು ನೇರವಾಗಿ ವೈಕುಂಠ ಧಾಮಕ್ಕೆ ಹೋಗುತ್ತಾರೆ ಎಂದು ನಂಬಲಾಗುತ್ತದೆ.