ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿಗಳು ಹೊರಬರುತ್ತಿದೆ. ಶುಭಾ ಪೂಂಜಾ ಅವರಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದರು ಎನ್ನಲಾದ ವಿಚಾರಕ್ಕೆ ನಟಿ ಇದೀಗ ಸ್ಪಷ್ಟನೆ ನೀಡಿದ್ದಾರೆ. ನನ್ನ ಖಾತೆಗೆ ಯಾವುದೇ ಮೆಸೇಜ್‌ಗಳು ಬಂದಿಲ್ಲ ಎಂದು ಶುಭಾ ಪೂಂಜಾ ತಿಳಿಸಿದ್ದಾರೆ.
ರೇಣುಕಾಸ್ವಾಮಿಯನ್ನು ಪಟ್ಟಗೆರೆ ಶೆಡ್‌ಗೆ ಕರೆದ ತಂದ ದರ್ಶನ್ ಗ್ಯಾಂಗ್ ಆರೋಪಿಗಳು ಬಳಿಕ ದರ್ಶನ್‌ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಜೊತೆ ಶೆಡ್‌ಗೆ ಆಗಮಿಸಿದ್ದ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಮೊಬೈಲ್ ಪಡೆದು ದರ್ಶನ್ ಪರಿಶೀಲನೆ ನಡೆಸಿದಾಗ ಇತರ ಶುಭಾಪೂಂಜಾ, ರಾಗಿಣಿಗೂ ಮೆಸೇಜ್ ಮಾಡಿದ್ದೀಯಾ? ಎಲ್ಲಾ ನಟಿಯರಿಗೂ ಇದೇ ರೀತಿ ಮೆಸೇಜ್ ಮಾಡುತ್ತಿದ್ದೀಯಾ ಎಂದು ದರ್ಶನ್ , ರೇಣುಕಾಸ್ವಾಮಿಗೆ ಗದರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ನಂದೀಶ್ ಹೇಳಿಕೆ ನೀಡಿದ್ದಾರೆ. ಚಾರ್ಜ್‌ಶೀಟ್ ಮಾಹಿತಿ ಹೊರಬಂದ ಬೆನ್ನಲ್ಲೇ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಕುರಿತು ರಾಗಿಣಿ ಯಾವುದೇ ಸ್ಪಷ್ಟನೆ ನೀಡಿಲ್ಲ.