ಬೆಂಗಳೂರು: ಬೆಂಗಳೂರು ನಗರ ಉತ್ತರ ಹಾಗೂ ದಕ್ಷಿಣ ಎಸಿಗಳಿಗೆ ಢವ ಢವ ಶುರುವಾಗಿದೆ. ಯಾಕೆಂದರೆ ಎಸಿಗಳ ವಿರುದ್ದ ನಡೆದಿದ್ದ ತನಿಖೆ ಮುಗಿದಿದ್ದು, ಸರ್ಕಾರದ ಅಂಗಳಕ್ಕೆ ತಲುಪಿದೆ. ಹೌದು ಕಂದಾಯ ಸಚಿವ ಕೃಷ್ಣಬೈರೇಗೌಡ ಕೆಂಗಣ್ಣಿಗೆ ಗುರಿಯಾಗಿದ್ದ, ಉತ್ತರ ಎಸಿ ಪ್ರಮೋದ್ ಪಾಟೀಲ್ ಹಾಗೂ ದಕ್ಷಿಣ ಎಸಿ ರಜನಿಕಾಂತ ವಿರುದ್ದದ ತನಿಖಾ ವರದಿ ಸರ್ಕಾರದ ಕೈ ಸೇರಿದೆ. ಕೆಎಎಸ್ ಅಧಿಕಾರಿಗಳು RCCMS ತಂತ್ರಾಂಶದ ಮೂಲಕ ಕೆಲಸ ಮಾಡದೆ, ಕರ್ತವ್ಯ ಲೋಪ ಮಾಡಿ ಕಳ್ಳಾಟ ಆಡಿರೋದು ತನಿಖೆಯಲ್ಲಿ ಬಯಲಾಗಿದೆ..ಕೆಎಎಸ್ ಅಧಿಕಾರಿ ಸಂಗಪ್ಪ ನೇತೃತ್ವದ, 12 ಅಧಿಕಾರಿಗಳ ತಂಡ ತನಿಖೆ ನಡೆದಿದ್ದು, 27 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಮ್ಮ ವ್ಯಾಪ್ತಿಗೆ ಬರುವ ಕೆಲಸವನ್ನು ಬಿಟ್ಟು, ಬೇರೆ ಕಾರ್ಯ ವ್ಯಾಪ್ತಿಗೆ ಬರುವ ಶೇ. 60 ರಷ್ಟು ಫೈಲ್ಗಳನ್ನು ಆರ್ಡರ್ ಮಾಡಿರೋದು ತನಿಖೆಯಲ್ಲಿ ಬಯಲಾಗಿದೆ.ಎಸಿ ಪ್ರಮೋದ್ ಪಾಟೀಲ್ ಹಾಗೂ ರಜನಿಕಾಂತ ಕಚೇರಿ ಕೆಲಸಗಳನ್ನ ಆನ್ ಲೈನ್ ಮಾಡದೆ ಆಫ್ ಲೈನ್ ನಲ್ಲೇ ಅತಿ ಹೆಚ್ಚು ಕೆಲಸ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಇನ್ನೂ ಎಸಿ ಕಚೇರಿ ಸುಧಾರಣೆ ಬಗ್ಗೆಯೂ ಸಂಗಪ್ಪ ನೇತೃತ್ವದ ತಂಡ ಸರ್ಕಾರಕ್ಕೆ ಸಲಹೆ ನೀಡಿದೆ..ಆದ್ರೆ ಸರ್ಕಾರ ಸಂಗಪ್ಪ ನೇತೃತ್ವದ ತಂಡ ನೀಡಿರೋ ವರದಿಯನ್ನ ಎಷ್ಟರ ಮಟ್ಟಿಗೆ ಅನುಷ್ಠಾನ ಮಾಡುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.