ಕಲಬುರಗಿ: ಅಡುಗೆ ಸಹಾಯಕರಿಗೆ ತಿಂಗಳ ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಸ್ಟೆಲ್ ವಾರ್ಡ್​ನ್ ಲೋಕಾಯುಕ್ತ ಅಧಿಕಾರಿಗಲ ಬಲೆಗೆ ಬಿದ್ದಿದ್ದಾರೆ.

ಕಲಬುರಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಘಟನೆ ಜರುಗಿದ್ದು, ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡ್​ನ್ ಶಿವಶರಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎನ್ನಲಾಗಿದೆ.

ವಾರ್ಡನ್ ಶಿವಶರಣಪ್ಪ ಅವರು, ಅಡುಗೆ ಸಹಾಯಕ ಶ್ರೀಮಂತ ಬಳಿ ತಿಂಗಳ ಹಾಜರಾತಿ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಕಚೇರಿಯಲ್ಲಿ 15 ಸಾವಿರ ಮುಂಗಡ ಹಣ ಪಡೆಯುವಾಗ ರೆಟ್​ಹ್ಯಾಂಡ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೆನಾಳ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

 

By Veeresh

Leave a Reply

Your email address will not be published. Required fields are marked *

Verified by MonsterInsights