Friday, November 21, 2025
20 C
Bengaluru
Google search engine
LIVE
ಮನೆ#Exclusive NewsTop Newsಹಸಿರು ಬೆಂಗಳೂರು ಸಸ್ಯಕಾಶಿಗೆ ಮತ್ತೊಂದು ಗರಿ-ಉಪ ಅರಣ್ಯಾಧಿಕಾರಿ ಬಿ.ಎಲ್.ಜಿ ಸ್ವಾಮಿ

ಹಸಿರು ಬೆಂಗಳೂರು ಸಸ್ಯಕಾಶಿಗೆ ಮತ್ತೊಂದು ಗರಿ-ಉಪ ಅರಣ್ಯಾಧಿಕಾರಿ ಬಿ.ಎಲ್.ಜಿ ಸ್ವಾಮಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಆವರಣ, ರಸ್ತೆಬದಿ, ಖಾಸಗಿ ಅಪಾರ್ಟ್ಮೆಂಟ್ಸ್, ಸಂಸ್ಥೆಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಬೆಳೆಸಿರುವ/ಬೆಳೆದಿರುವ ಮರಗಳ ಗಣತಿ ಕಾರ್ಯಕ್ಕೆ ದಿಟ್ಟ ಹೆಜ್ಜೆಯನ್ನು ಪಾಲಿಕೆ ಅರಣ್ಯ ಘಟಕವು ಕೈಗೊಂಡಿದೆ.

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್(KSRSAC) ರವರ ಸಹಯೋಗದೊಂದಿಗೆ ಮರಗಣತಿ ನಿರ್ವಹಿಸುವ ಸಂಬಂಧ ತತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ಬೆಂಗಳೂರು ನಗರದ ಭೌಗೋಳಿಕ ವಿಸ್ತೀರ್ಣ 840 sq/km ರಲ್ಲಿ ಸಮನಾಗಿ ಅಂದರೆ 100 sq/km ನಂತೆ 08 ವಿಭಾಗವನ್ನಾಗಿ ಮಾಡಿಕೊಂಡು, ಸದರಿ 100 sq/km ನಲ್ಲಿ ಬರುವ ಎಲ್ಲಾ ವಾರ್ಡ್ಗಳನ್ನು ಸಂಪೂರ್ಣವಾಗಿ ತೆಗೆದುಕೊಂಡು 01 ಯುನಿಟ್ ಎಂದು ಪರಿಗಣಿಸಿ ಒಂದೊಂದು ಯುನಿಟ್ಗೆ ಒಬ್ಬರಂತೆ 08 ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ. ತದನಂತರ ಗುತ್ತಿಗೆ ಪಡೆದಿರುವವರು ಮರಗಳ ಜಾತಿ, ಸುತ್ತಳತೆ ಹಾಗೂ ಛಾಯಾಚಿತ್ರಗಳನ್ನು ಸದರಿ ತಂತ್ರಾಂಶದಲ್ಲಿ ನಮೂದಿಸುವ ಮರಗಣತಿ ಕಾರ್ಯವನ್ನು ನಿರ್ವಹಿಸಲಿದ್ದಾರೆ.

ಮುಂದುವರೆದು, ಇದುವೆರೆಗೂ ಬೆಂಗಳೂರಿನಾದ್ಯಂತ ಹಳೆಯ 198 ವಾರ್ಡ್ಗಳಲ್ಲಿ ಮರಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಸುಮಾರು 1,43,100 ಮರಗಳನ್ನು ಗುರುತಿಸಲಾಗಿದೆ. ಇದಲ್ಲದೆ ಮರಗಣತಿ ಕಾರ್ಯ ಪ್ರಗತಿಯಲ್ಲಿರುತ್ತದೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಂತರ್ಜಾಲದಲ್ಲಿ ಬೆಂಗಳೂರಿನಾದ್ಯಂತ ಬೆಳೆಸಿರುವ/ಬೆಳೆದಿರುವ ವಿವಿಧ ಜಾತಿಯ ಮರಗಳ ಜಾತಿಯ ಬಗ್ಗೆ ಹಾಗೂ ಮರಗಳ ಸಂಖ್ಯೆಯ ವಿವರಗಳನ್ನು ನೀಡಲು ಬಿಬಿಎಂಪಿ ಅರಣ್ಯ ಘಟಕ ಯೋಜಿಸಿದ್ದು, ಆ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಬಿಬಿಎಂಪಿ ಆರಣ್ಯ ಘಟಕವು ಮರಗಣತಿ ಕಾರ್ಯವನ್ನು ಪ್ರಾರಂಭಿಸಿದ್ದು, ಶೀಘ್ರ ಮರಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುವುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಎಲ್.ಜಿ ಸ್ವಾಮಿ ರವರು ತಿಳಿಸಿರುತ್ತಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments