ದರ್ಶನ್ ಆ್ಯಂಡ್ ಗ್ಯಾಂಗ್ ಹಲ್ಲೆಗೆ ಬಳಸಿದ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್

ಬೆಂಗಳೂರು: ರೇಣುಕಾಸ್ವಾಮಿ ಕ್ರೂರ ಕೊಲೆ ಪ್ರಕರಣದ ಚಾರ್ಜ್‌ಶೀಟ್ ಅನ್ನು ಪೊಲೀಸರು ಕೋರ್ಟ್ಗೆ ತಲುಪಿಸಿದ್ದಾರೆ. 3991 ಪುಟಗಳ ಚಾರ್ಜ್ಶೀಟ್ನಲ್ಲಿ ಹಲವು ಭೀಕರ ಅಂಶಗಳನ್ನು ನಮೂದಿಸಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ದರ್ಶನ್ ಗ್ಯಾಂಗ್‌ನ ಕ್ರೌರ್ಯದ ಅಸಲಿ ಮುಖ ಅನಾವರಣವಾಗಿದೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದ ಆರೋಪಿಗಳು ಅಕ್ಷರಶಃ ರಾಕ್ಷಸರಂತೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿರುವ ಫೋಟೋಗಳನ್ನು ತನಿಖೆಯಲ್ಲಿ ಪೊಲೀಸರು ರಿಟ್ರೀವ್ ಮಾಡಿದ್ದಾರೆ.
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡು ಎರಡು ಲಾರಿಗಳ ಮಧ್ಯೆ ಬಿದ್ದಿರೋದು ಒಂದು ಫೋಟೋ ಆದ್ರೆ ಮತ್ತು ಬಿಟ್ಟು ಬಿಡಿ ಅಂತ ಅಂಗಲಾಚುತ್ತಿರುವ ಫೋಟೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ಈ ಫೋಟೋ ತೆಗೆದದ್ದು ಯಾರು? ಈ ಫೋಟೋ ಹಿಂದಿನ ಕಥೆ ಅತ್ಯಂತ ಭಯಾನಕವಾದ ರಕ್ತಚರಿತ್ರೆಯನ್ನು ಬಿಚ್ಚಿಡುತ್ತಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಚೀರಾಟ ಮಾಡುತ್ತಿದ್ದ. ರೇಣುಕಾಸ್ವಾಮಿ ಅಂಗಲಾಚುತ್ತಿದ್ದರೆ ಆರೋಪಿಗಳು ಅಟ್ಟಹಾಸದಲ್ಲಿ ಕೂಗಾಡಿದ್ದಾರೆ. ಈ ವೇಳೆ ಗೇಟ್ ಹೊರಗಿದ್ದ ಸೆಕ್ಯೂರಿಟಿ ಗಾರ್ಡ್ ಒಳಗೆ ಬಂದಿದ್ದಾನೆ. ಹಲ್ಲೆ ಮಾಡಿದನ್ನು ಕಣ್ಣಾರೆ ನೋಡಿದ್ದ ಸೆಕ್ಯೂರಿಟಿ ಗಾರ್ಡ್ ತಕ್ಷಣವೇ ಶೆಡ್ ಮಾಲೀಕ ವಿನಯ್‌ಗೆ ಫೋನ್ ಮಾಡಿ ತಿಳಿಸಿದ್ದಾರೆ. ಆಗ ವಿನಯ್, ಅವರು ನಮ್ಮವರೇ ಬಿಡು ಎಂದಿದ್ದಾರಂತೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಐ ವಿಟ್ನೇಸ್ ಆಗಿದ್ದು, ಆರೋಪಿ ವಿನಯ್‌ಗೆ ಕಾಲ್ ಮಾಡಿ ಅಣ್ಣಾ ಅವರು ತೀರಾ ಜೋರಾಗಿ ಹೊಡೆದಿದ್ದಾರೆ. ಅವನು ಲಾರಿಗಳ ನಡುವೆ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಆಗ ವಿನಯ್ ಅವನ ಫೋಟೋ ಕಳಿಸು ಅಂತ ಹೇಳಿದ್ದಾರೆ. ಆಗ ಸೆಕ್ಯೂರಿಟಿ ಫೋಟೋ ತೆಗೆದು ವಿನಯ್‌ಗೆ ಕಳಿಸಿದ್ದಾರೆ. ವಿನಯ್ ಆ ಫೋಟೋಗಳನ್ನ ನಟ ದರ್ಶನ್‌ಗೆ ತೋರಿಸಿದ್ದು, ಫೋಟೋಸ್ ನೋಡಿದ ಬಳಿಕ ದರ್ಶನ್ ಶೆಡ್‌ಗೆ ಬಂದಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ನಿತ್ರಾಣವಾಗಿ ಬಿದ್ದಿದ್ದ ಫೋಟೋವನ್ನು ಸೆಕ್ಯೂರಿಟಿ ಗಾರ್ಡ್ ವಿನಯ್‌ಗೆ ಕಳುಹಿಸಿದ್ದಾರೆ. ದರ್ಶನ್‌ಗೆ ಫೋಟೋ ತೋರಿಸಿದ ಬಳಿಕ ವಿನಯ್ ಡಿಲೀಟ್ ಮಾಡಿದ್ದರು. ಮೊಬೈಲ್ ರಿಟ್ರೀವ್ ಮಾಡಿದ್ದ ವೇಳೆ ಅದು ಸಿಕ್ಕಿದೆ. ಡಿಲೀಟ್ ಆದ ಫೋಟೋಗಳನ್ನು FSL ಟೀಮ್ ರಿಟ್ರೀವ್ ಮಾಡಿದೆ. ಎ10 ವಿನಯ್ ಫೋನ್‌ನಲ್ಲಿ ಕೇವಲ ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್ ಮಾಡಲಾಗಿದೆ. ಅದರಲ್ಲಿ ಸದ್ಯ ಎರಡು ಪ್ರಮುಖ ಫೋಟೋಗಳು ಮಾತ್ರ ಬಿಡುಗಡೆಯಾಗಿದೆ.




