ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಭಾರಿ ಅನಾಹುತವೇ ನಡೆದು ಹೋಗಿದೆ. ಬೃಹದಾಕಾರದ ಡೇಂಜರ್ ಮರಗಳು ಉರುಳಿ ಬಿದ್ದಿದ್ದು ಸಾಲು ಸಾಲು ಅವಾಂತರ ಸೃಷ್ಟಿಸಿವೆ. ಜನರ ಸಾವಿನ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.
ಚಲಿಸುತ್ತಿರುವ ಆಟೋ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಆಟೋದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಕೊಂಬೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಯಗೊಂಡಿದ್ದಾನೆ.
ಇದೀಗ ರಾಜಧಾನಿಯಲ್ಲಿರುವ ಅಪಾಯಕಾರಿ ಒಣ ಮರಗಳು ತೆರವು ಕಾರ್ಯಕ್ಕೆ ಮುಂದಾಗಿದ್ದು, ಬೆಳಗ್ಗೆಯಿಂದ ಡೇಂಜರ್ ಮರಗಳ ತೆರವು ಕಾರ್ಯ ನಡೆಯುತ್ತಿದೆ. ಬಳಿಕ ಬಿಬಿಎಂಪಿ ಅರಣ್ಯ ಘಟಕದ ಸಹಯೋಗದೊಂದಿಗೆ ಅಧಿಕಾರಿಗಳು ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.


