Wednesday, August 20, 2025
18.3 C
Bengaluru
Google search engine
LIVE
ಮನೆ#Exclusive NewsTop NewsSSLC ಪರೀಕ್ಷೆ ಹಿನ್ನಲೆ ಬಂದ್ ಮುಂದೂಡಲಾಗುತ್ತಾ..?

SSLC ಪರೀಕ್ಷೆ ಹಿನ್ನಲೆ ಬಂದ್ ಮುಂದೂಡಲಾಗುತ್ತಾ..?

ಬೆಂಗಳೂರು: ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್​ಗೆ ವಾಟಳ್​ ನಾಗರಾಜ್ ಅವರು ಕರೆ ಕೊಟ್ಟಿದ್ದಾರೆ. ಆದರೆ ಮಾರ್ಚ್ 21ರಿಂದ 10ನೇ ತರಗತಿ ಪರೀಕ್ಷೆ ನಡೆಯುವುದರಿಂದ ಕರ್ನಾಟಕ ಬಂದ್​ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.ಪಿಯುಸಿ ಪರೀಕ್ಷೆಗಳು ಇಂದು ಆರಂಭವಾಗಿ ಮಾರ್ಚ್​ 20ಕ್ಕೆ ಕೊನೆಗೊಳ್ಳಲಿವೆ. ಇದರ ಬೆನ್ನಲ್ಲೇ ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ 10ನೇ ತರಗತಿ ಪರೀಕ್ಷೆ ನಡೆಯುತ್ತವೆ. ಮಾರ್ಚ್​ 22ಕ್ಕೆ ಕರ್ನಾಟಕ ಬಂದ್ ಘೋಷಣೆ ಮಾಡಿದ್ದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂದು ಸಮಸ್ಯೆ ಆಗುತ್ತದೆ. ಇಷ್ಟು ವರ್ಷ ಓದಿದ್ದನ್ನ ಒಂದೇ ದಿನದಲ್ಲೇ ವಿದ್ಯಾರ್ಥಿಗಳು ನಷ್ಟ ಮಾಡಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಬಂದ್​ಗೆ ಬೆಂಬಲ ನೀಡಲ್ಲ ಎಂದು ಕೆಲ ಕನ್ನಡ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments