Top Newsಸುದ್ದಿ

ಉಪ ಚುನಾವಣೆ ಹಿನ್ನಲೆ: ಸಂಡೂರಿಗೆ ಬಂಪರ್‌ ಕೊಡುಗೆ ಘೋಷಿಸಿದ ಸಿಎಂ

ಬಳ್ಳಾರಿ: ಶೀಘ್ರದಲ್ಲೇ ಉಪ ಚುನಾವಣೆಗೆ ಸಾಕ್ಷಿಯಾಗಲಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಬಂಪರ್‌ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದೆ. ಕುಡಿಯುವ ನೀರು, ಸೂಪರ್ ಮಲ್ಟಿ ಸ್ಪೆಷಾಲಿಟಿ , ವಿವಿಧ ಜಾತಿಗಳ ಸಮುದಾಯ ಭವನ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಸಂಡೂರಿಗೆ ಸಿಎಂ ಘೋಷಿಸಿದ್ದು ಏನೇನು?

  • ಸಂಡೂರು ಕ್ಷೇತ್ರದ 58 ಹಳ್ಳಿಗಳಿಗೆ160 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ.
  • ನಾರಿಹಳ್ಳ ಜಲಾಶಯದಿಂದ ಸುಧಾರಿತ ನೀರುಸರಬರಾಜು ಯೋಜನೆಗೆ 54.45 ಕೋಟಿ ರೂಪಾಯಿ.
  • 07.50 ಕೋಟಿ ವೆಚ್ಚದಲ್ಲಿ ಹಿಂದುಳಿದ 13 ಸಮುದಾಯಗಳಿಗೆ ಸಮುದಾಯ‌ಭವನ ನಿರ್ಮಾಣ.
  • (ವೀರಶೈವ‌ ಲಿಂಗಾಯತ, ವಿಶ್ವಕರ್ಮ,ಕುಂಬಾರ, ಮೇದಾರ,ಗೊಲ್ಲ,ಕುರುಬ,ಮಡಿವಾಳ ಸೇರಿದಂತೆ ವಿವಿಧ ಸಮುದಾಯಗಳಿಗೆ ಸಮುದಾಯ ಭವನ)
  • 180 ಕೋಟಿ‌ವೆಚ್ಚದಲ್ಲಿ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‌ಘೋಷಣೆ.
  • 30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ.

ಈ ಎಲ್ಲಾ ಯೋಜೆನಗಳನ್ನು ಘೋಷಿಸಿ ಮಾತನಾಡಿದ ಸಿಎಂ, ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು. ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಸಿಎಂ ಕರೆ ನೀಡಿದರು.

Comments (0)

Your email address will not be published. Required fields are marked *

Back to top button