#Exclusive NewsTop Newsರಾಜ್ಯವೆಬ್ ಸ್ಟೋರೀಸ್ವೈರಲ್ ನ್ಯೂಸ್ಸಿನಿಮಾಸುದ್ದಿ

ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್‌ ಕೈಯಲ್ಲಿದ್ದ ಜಾಕೆಟ್‌ ಹಿಂದಿದೆ ಪ್ರೀತಿಯ ಕಥೆ! ಗೊತ್ತಾದ್ರೆ ನಿಮ್ಗೂ ಅಯ್ಯೋ ಅನ್ನಿಸುತ್ತೆ!

ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಈ ವೇಳೆ ನಟ ದರ್ಶನ್‌ ಒಂದು ಜಾಕೆಟ್‌‌ನ ಬೆಂಗಳೂರಿನಿಂದ ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಬಂದಿದ್ದಾರೆ. ಇದರ ಹಿಂದಿದೆ ಒಂದು ಎಮೋಷನಲ್‌ ಅಟ್ಯಾಚ್‌ಮೆಂಟ್‌.

ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಇಂದು ಮುಂಜಾನೆ 4:30ಕ್ಕೆ ಪರಪ್ಪನ‌ ಅಗ್ರಹಾರದಿಂದ ದರ್ಶನ್ ಅವರನ್ನು ಟಿಟಿ ವಾಹನದ ಮೂಲಕ ಶಿಫ್ಟ್ ಮಾಡಲಾಗಿದೆ.ಇನ್ನೂ ನಟ ದರ್ಶನ್‌ ಬ್ಲ್ಯಾಕ್‌ ಟಿಶರ್ಟ್,ಬ್ಲೂ ಜೀನ್ಸ್‌,ಸನ್‌ಗ್ಲಾಸ್‌ ಜೊತೆ ಬಂದಿರೋ ಫೋಟೋ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿತ್ತು. ನಟ ದರ್ಶನ್‌ ಬ್ರಾಂಡೆಂಡ್ ಡ್ರೆಸ್‌ ಬಿಂದಿದ್ದಾರೆ ಅಂತ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್‌ ಒಂದು ಜಾಕೆಟ್‌‌ನ ಬೆಂಗಳೂರಿನಿಂದ ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಬಂದಿದ್ದಾರೆ. ಇದರ ಹಿಂದಿದೆ ಒಂದು ಎಮೋಷನಲ್‌ ಅಟ್ಯಾಚ್‌ಮೆಂಟ್‌. ಹೌದು, ನಟ ದರ್ಶನ್‌ಗೆ ತಮ್ಮ ಪ್ರೀತಿಯ ಮಗ ಕೊಟ್ಟಿದ್ದ ಪುಲ್‌ಓವರ್‌ನ ಜೊತೆಯಲ್ಲೇ ಇಟ್ಟುಕೊಂಡು ಬಂದಿದ್ದಾರಂತೆ. ಇದೇ ಅಲ್ವಾ ತಂದೆ-ಮಗನ ಪ್ರೀತಿ. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಅನ್ನೋದನ್ನು ನಾವು ಹೇಳ್ತಿಲ್ಲ.ಅದನ್ನ ಕಾನೂನು ನಿರ್ಧರಿಸುತ್ತೆ. ನಟ ದರ್ಶನ್‌ ತಮ್ಮ ಮಗನನ್ನು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಈಗ ಇಂಥ ಪರಿಸ್ಥಿತಿ ಬಂದಿದೆ. ತಮ್ಮ ಮಗನನ್ನು ದರ್ಶನ್‌ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ…

Comments (0)

Your email address will not be published. Required fields are marked *

Back to top button