ಟಾಲಿವುಡ್ ಹೀರೋ ಬಾಲಕೃಷ್ಣ ಅಸಲಿ ಮುಖವನ್ನು ಸ್ಟಾರ್ ಡೈರೆಕ್ಟರ್ ಕೆಎಸ್ ರವಿಕುಮಾರ್ ಅನಾವರಣ ಮಾಡಿದ್ದಾರೆ. ತಮಿಳಿನಿನ ಗಾರ್ಡಿಯನ್ ಮೂವಿಯ ಪ್ರೀ ರಿಲೀಸ್ ಇವೆಂಟ್ನಲ್ಲಿ ನಿರ್ದೇಶಕ ಕೆಎಸ್ ರವಿಕುಮಾರ್, ಬಾಲಕೃಷ್ಣ ಕುರಿತಾಗಿ ಆಡಿದ ಮಾತುಗಳು ಸಿನಿಪ್ರೇಮಿಗಳನ್ನು ಬೆಚ್ಚಿ ಬೀಳಿಸಿವೆ.
ಶೂಟಿಂಗ್ ಸಂದರ್ಭದಲ್ಲಿ ಯಾರಾದ್ರೂ ನಕ್ಕರೆ ಬಾಲಕೃಷ್ಣ ಸಹಿಸಲ್ಲ.. ನನ್ನನ್ನೇ ನೋಡಿ ಅವರು ನಗ್ತಿದ್ದಾರೆ ಎಂದು ಬಾಲಕೃಷ್ಣ ಫೀಲ್ ಆಗ್ತಾರೆ. ಕೋಪ ಮಾಡ್ಕೋತಾರೆ. ಹತ್ತಿರಕ್ಕೆ ಕರೆದು ಕೆನ್ನೆಗೆ ಬಾರಿಸಿಬಿಡ್ತಾರೆ ಬಾಲಕೃಷ್ಣ.
ಸಿನಿಮಾವೊಂದರ ವೇಳೆ ಚಿತ್ರೀಕರಣ ಮಾಡ್ತಿದ್ದ ಸಂದರ್ಭದಲ್ಲಿ ನನ್ನ ಅಸಿಸ್ಟಂಟ್ ಶರವಣನ್ಗೆ ಫ್ಯಾನ್ ತಿರುಗಿಸಲು ಹೇಳಿದೆ.. ಆತ ಆಕಸ್ಮಾತ್ ಆಗಿ ಬಾಲಕೃಷ್ಣ ಕುಳಿತಿದ್ದ ಕಡೆ ಫ್ಯಾನ್ ತಿರುಗಿಸಿಬಿಟ್ಟ..ಇದರಿಂದ ಬಾಲಕೃಷ್ಣ ವಿಗ್ ಸ್ವಲ್ಪ ಪಕ್ಕಕ್ಕೆ ಸರಿಯಿತು. ಇದರಿಂದ ಶರವಣನ್ ಮುಖದಲ್ಲಿ ನಗು ಮೂಡಿತು.. ಇದನ್ನು ನೋಡಿದ ಕೂಡ್ಲೇ ಬಾಲಕೃಷ್ಣಗೆ ಕೋಪ ಬಂತು.. ಏಕೆ ನಗ್ತಿದ್ದೀಯಾ ಎಂದು ಜೋರಾಗಿ ಅರಚಿಕೊಂಡ್ರು..
ಬಾಲಕೃಷ್ಣ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಶರವಣನ್ನನ್ನು ಹತ್ತಿರಕ್ಕೆ ಕರೆದರು.. ಕೂಡ್ಲೇ ಆತನನ್ನು ಎಲ್ಲಿ ಹೊಡೀತಾರೋ ಎಂದು ನಾನು ಮಧ್ಯಪ್ರವೇಶ ಮಾಡಿದೆ.. ಸರ್ ಅವನು ನಮ್ಮ ಅಸಿಸ್ಟೆಂಟ್ ಎಂದು ವಿವರಣೆ ನೀಡಿದೆ. ಆದರೂ, ಬಾಲಕೃಷ್ಣ ಕೂಲ್ ಆಗಲಿಲ್ಲ.. ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗು ಎಂದು ಶರವಣನ್ಗೆ ಜೋರಾಗಿ ಬಾಲಕೃಷ್ಣ ಹೇಳಿದ್ರು..
ಹೀಗಂತ ಸ್ಟಾರ್ ಡೈರೆಕ್ಟರ್ ಕೆಎಸ್ ರವಿ ಕುಮಾರ್ ಹೇಳ್ತಿರುವಾಗ ವೇದಿಕೆಯಲ್ಲಿದ್ದ ನಟಿ ಹನ್ಸಿಕಾ ಸೇರಿ ಎಲ್ಲರೂ ನಗುತ್ತಲೇ ಇದ್ರು.
ಅಂದ ಹಾಗೇ, ನಟ ಬಾಲಯ್ಯಗೆ ಜೈಸಿಂಹ, ರೂಲರ್ ಸಿನಿಮಾಗಳಿಗೆ ಕೆಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಿದ್ರು.