Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop Newsಬಾಲ ಕಲಾವಿದೆಯಾಗಿ ಮಿಂಚಿದ ಬೇಬಿ ಶಾಮಿಲಿ ಈಗ ಪೇಂಟರ್ ಆಗಿದ್ದಾರೆ..

ಬಾಲ ಕಲಾವಿದೆಯಾಗಿ ಮಿಂಚಿದ ಬೇಬಿ ಶಾಮಿಲಿ ಈಗ ಪೇಂಟರ್ ಆಗಿದ್ದಾರೆ..

ಬೇಬಿ ಶಾಮಿಲಿ, ಅವರು  ಬಾಲನಟಿ. ಅವರು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದವರು. ನಟನೆಯಲ್ಲಿ ಸಾಧನೆ ಮಾಡಿದ ನಂತರ, ಅವರು ಸಿನಿಮಾಗಳಿಂದ ದೂರ ಸರಿದರು ಮತ್ತು ಈಗ ಯಶಸ್ವಿಯಾಗಿ ಪೇಂಟರ್ ಆಗಿದ್ದಾರೆ.

1987ರ ಜುಲೈ 10ರಂದು ಅವರು ಜನಿಸಿದರು. ಶಾಮಿಲಿ ಜನಿಸಿದ್ದು ತಮಿಳುನಾಡಿನಲ್ಲಿ. ಎರಡೇ ವರ್ಷಕ್ಕೆ ಅಂದರೆ 1980ರಲ್ಲಿ ‘ರಾಜನದೈ’ ಸಿನಿಮಾದಲ್ಲಿ ನಟಿಸಿದರು. ನಂತರ ಅವರು ಸಾಕಷ್ಟು ಜನಪ್ರಿಯತೆ ಪಡೆದರು.  ಬೇಬಿ ಶಾಮಿಲಿ ಎಂದರೆ ಅನೇಕರಿಗೆ ಪರಿಚಯ ಇದೆ. 90ರ ದಶಕದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದರು. ಬಾಲ ಕಲಾವಿದೆಯಾಗಿ ಪಡೆದ ಜನಪ್ರಿಯತೆ ತುಂಬಾನೇ ದೊಡ್ಡದು. ಹಲವಾರು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸಿ ಮೆಚ್ಚುಗೆ  ಗಳಿಸಿದ್ದ ನಟಿ  ಬೇಬಿ ಶಾಮಿಲಿ , ತಮ್ಮ ಮುದ್ದಾದ ಮಾತುಗಳಿಂದ ಜನರನ್ನು ಆಕಷ್ಷಿಸುತ್ತಿದ್ದರು.

1990ರಲ್ಲಿ ಬೇಬಿ ಶಾಮಿಲಿ ಅವರು ‘ಅಂಜಲಿ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಪ್ರಶಸ್ತಿ ದೊರೆಯಿತು. ಅದೇ ವರ್ಷ ರಿಲೀಸ್ ಆದ ಮಲಯಾಳಂನ ‘ಮಲೂಟ್ಟಿ’ ಚಿತ್ರದಲ್ಲಿ ನಟಿಸಿ ರಾಜ್ಯ ಪ್ರಶಸ್ತಿ ಪಡೆದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದಲ್ಲಿ ನಟಿಸಿ ಅವರು ರಾಜ್ಯ ಪ್ರಶಸ್ತಿ  ಪಡೆದರು. ಒಂದೇ ವರ್ಷ ಮೂರು ರಾಜ್ಯ ಹಾಗೂ ಒಂದು ರಾಷ್ಟ್ರ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಅವರಿಗೆ ಇದೆ.

‘ಪೋಲಿಸ್ ಲಾಕಪ್’, ‘ಭೈರವಿ’, ‘ಹೂವು ಹಣ್ಣು’, ‘ಕಾದಂಬರಿ’,  ಮೊದಲಾದ ಕನ್ನಡದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 2000ರವರೆಗೆ ಅವರು ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು. ನಂತರ ಅವರು ನಾಯಕಿ ಆಗಬೇಕು ಎಂದು ಕನಸು ಕಂಡರು. ಈ ಕಾರಣಕ್ಕೆ ಒಂದು ಗ್ಯಾಪ್ ಕೊಟ್ಟರು. 2009ರಲ್ಲಿ ತೆಲುಗಿನ ‘ಒಯೇ’ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದರು. ಆದರೆ, ಅವರು ನಾಯಕಿ ಆಗಿ ಯಶಸ್ಸು ಕಾಣಲಿಲ್ಲ.

ಇದು ಅವರಿಗೆ ಬೇಸರ ಮೂಡಿಸಿತು. ಹೀಗಾಗಿ ಮತ್ತೆ ಬ್ರೇಕ್ ಪಡೆದರು. ಏಳು ವರ್ಷ ಬಿಟ್ಟು ಮತ್ತೆ ಬಂದರು. ಆದರೆ, ಸಿನಿಮಾ ಗೆಲ್ಲಲಿಲ್ಲ. ನಂತರ ತಮಿಳು ಹಾಗೂ ತೆಲುಗಿನಲ್ಲಿ ತಲಾ ಒಂದು ಸಿನಿಮಾ ಮಾಡಿದರು. ಆದರೆ, ಗೆಲುವು ಸಿಗಲೇ ಇಲ್ಲ. ಶಾಮಿಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಸುಮಾರು 3 ಲಕ್ಷ ಹಿಂಬಾಲಕರು ಇದ್ದಾರೆ.

ಶಾಮಿಲಿ ಅವರು ಪೇಂಟಿಂಗ್ ಮಾಡುತ್ತಾರೆ. ಇದನ್ನು ಅವರು ಮಾರಾಟ ಮಾಡುತ್ತಾರೆ. ಅವರ ಕಲ್ಪನೆಗಳನ್ನು ಬಿಡಿಸಿ ಮಾರುತ್ತಾರೆ. ಅವರು ಬಿಡಿಸೋ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments