ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಕರೆಯಲ್ಪಡುವ ಬಾಬಾ ವಂಗಾ ಭವಿಷ್ಯವಾಣಿಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಏಲಿಯನ್‌ಗಳ ಕುರಿತಾದ ಮುನ್ಸೂಚನೆಗಳು ತಾಂತ್ರಿಕ ಲೋಕ ಹಾಗೂ ಸಾಮಾನ್ಯ ಜನರಲ್ಲಿ ಕುತೂಹಲ ಮತ್ತು ಆತಂಕ ಎರಡನ್ನೂ ಒಟ್ಟಿಗೇ ಸೃಷ್ಟಿಸಿವೆ.
ಬಾಬಾ ವಂಗಾ ಅವರ ಭವಿಷ್ಯದ ಪ್ರಕಾರ, 2026ರಲ್ಲಿ AI ಮಾನವನ ಬುದ್ಧಿಶಕ್ತಿಯನ್ನು ಮೀರಿ ಬೆಳೆಯಲಿದ್ದು, ಜಾಗತಿಕ ಆರ್ಥಿಕತೆಯನ್ನು ಸಂಪೂರ್ಣವಾಗಿ ಮರುರೂಪಿಸಲಿದೆ. ಹಲವು ಕ್ಷೇತ್ರಗಳಲ್ಲಿ AI ಬಳಕೆಯಾಗುತ್ತಿರುವುದು ಮತ್ತು ಉದ್ಯೋಗ ಕಡಿತದ ಭೀತಿ ಎದುರಾಗಿರುವುದು ಈ ಭವಿಷ್ಯವಾಣಿಗೆ ಪುಷ್ಟಿ ನೀಡುವಂತಿದೆ. ಇದಕ್ಕಿಂತಲೂ ಸ್ಫೋಟಕ ಸಂಗತಿಯೆಂದರೆ, ನವೆಂಬರ್ 2026ರಲ್ಲಿ ಭೂಮಿಯ ವಾತಾವರಣಕ್ಕೆ ಬೃಹತ್ ಬಾಹ್ಯಾಕಾಶ ನೌಕೆಯೊಂದು ಪ್ರವೇಶಿಸಲಿದ್ದು, ಮಾನವರು ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು UFOಗಳಿಗೆ ಸಂಬಂಧಿಸಿದ ಗುಪ್ತ ದಾಖಲೆಗಳನ್ನು ಬಿಡುಗಡೆ ಮಾಡಲು ಮುಂದಾಗಿರುವುದು ಈ ಭವಿಷ್ಯವಾಣಿಯನ್ನು ಜನರು ಮತ್ತಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ.
2130ರಲ್ಲಿ ಅನ್ಯಗ್ರಹ ಜೀವಿಗಳ ನೆರವಿನಿಂದ ಮಾನವರು ಸಮುದ್ರದ ಅಡಿಯಲ್ಲಿ ನಗರಗಳನ್ನು ನಿರ್ಮಿಸಲಿದ್ದಾರೆ ಮತ್ತು 2288ರಲ್ಲಿ ಸಮಯ ಪ್ರಯಾಣ ಸಾಧ್ಯವಾಗಲಿದೆ ಎಂದೂ ಹೇಳಿವೆ. ಆದಾಗ್ಯೂ, ಈ ಅನ್ಯಗ್ರಹ ಜೀವಿಗಳ ಭೇಟಿಯು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕಕಾರಿ ಮುನ್ಸೂಚನೆಯೂ ಇದರಲ್ಲಿದೆ. ಬಾಬಾ ವಂಗಾ ಅವರು ಈ ವಿಚಾರಗಳನ್ನು ಎಲ್ಲಿಯೂ ಬರೆದಿಟ್ಟಿಲ್ಲವಾದರೂ, ಅವರ ಅನುಯಾಯಿಗಳು ಮತ್ತು ಸೋದರ ಸೊಸೆಯ ಮೂಲಕ ಹರಿದುಬಂದಿರುವ ಈ ಮಾತುಗಳು ಪ್ರತಿ ಬಾರಿ ಜಾಗತಿಕ ಘಟನೆಗಳು ಸಂಭವಿಸಿದಾಗ ವೈರಲ್ ಆಗುತ್ತಲೇ ಇರುತ್ತವೆ.


