ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳು ನಿಜವಾಗಿವೆ. ಹೌದು ಅಮೆರಿಕದ ಮೇಲೆ ಉಗ್ರರ ದಾಳಿ, ಕೋವಿಡ್ ಸಾಂಕ್ರಾಮಿಕ ರೋಗ ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇತ್ತೀಚಿಗಷ್ಟೇ ಅವರು ಡೊನಾಲ್ಡ್ ಟ್ರಂಪ್ ಬಗ್ಗೆ ನುಡಿದಿದ್ದ ಶಾಕಿಂಗ್ ಭವಿಷ್ಯವಾಣಿ ಸಖತ್ ವೈರಲ್ ಆಗಿತ್ತು. ಇದೀಗ ಅವರು ಹೊಸ ವರ್ಷ 2025 ರಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯಲಿದೆ.
1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ ತನ್ನ ಶಕ್ತಿಗಳ ಮೂಲಕ 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ಮೊದಲೇ ನುಡಿದಿದ್ದಾರೆ. ಅವರು ಜಪಾನ್ ಪ್ರವಾಹ, ಆರ್ಥಿಕ ಬಿಕ್ಕಟ್ಟು ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿತ್ತು. ಅವರು 2025 ರಲ್ಲಿ ನಡೆಯಲಿರುವ ಪ್ರಮುಖ ಘಟನಾವಳಿಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಅವರು ತಮ್ಮ ಭವಿಷ್ಯವಾಣಿಯಲ್ಲಿ ಮುಂದಿನ ವರ್ಷದಲ್ಲಿ ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ಹೊಸ ವರ್ಷ 2025 ರ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳು:
ಯುರೋಪಿನ ವಿನಾಶ:
ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಯುರೋಪಿನಲ್ಲಿ ಆಂತರಿಕ ಕಲಹ, ಭೀಕರ ಯುದ್ಧವೊಂದು ನಡೆಯಲಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಸಂಘರ್ಷ ಎಲ್ಲೆಡೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಮತ್ತು ಈ ಕಾರಣದಿಂದಾಗಿ, ಯುರೋಪ್ ಖಂಡದಲ್ಲಿ ಜನ ಸಂಖ್ಯೆಯೂ ಕುಸಿದು ಹೋಗಿ ನಂತರದ ವರ್ಷಗಳಲ್ಲಿ ಇಡೀ ಜಗತ್ತು ಅವನತಿಯತ್ತ ಸಾಗಬಹುದು ಎಂದು ಭವಿಷ್ಯ ವಾಣಿಯಲ್ಲಿ ಹೇಳಿದ್ದಾರೆ.
ಏಲಿಯನ್‌ಗಳೊಂದಿಗೆ ಮಾನವನ ಸಂಭಾಷಣೆ:
ಬಾಬಾ ವಂಗಾ ಅವರು 2025 ರಲ್ಲಿ ನಡೆಯಲಿರುವ ಇನ್ನೊಂದು ಪ್ರಮುಖ ಘಟನಾವಳಿಯ ಬಗ್ಗೆ ಭವಿಷ್ಯ ನುಡಿದಿದ್ದು, 2025 ರಲ್ಲಿ, ಭೂಮಿಯಿಂದ ಹೊರಗಿರುವ ಅನ್ಯಗ್ರಹ ಜೀವಿಗಳು ಅಂದರೆ ಏಲಿಯನ್ಸ್‌ಗಳೊಂದಿದೆ ಸಂವಹನವನ್ನು ನಡೆಸುವಲ್ಲಿ ಮಾನವರು ಯಶಸ್ವಿಯಾಗಬಹುದು ಎಂದು ಹೇಳಿದ್ದಾರೆ.