ಬೆಂಗಳೂರು – ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಕಾಂಗ್ರೆಸ್​​ ಮುಗಿಬಿದಿದ್ದು, ಬಿ.ವೈ. ವಿಜಯೇಂದ್ರ ಮೇಲೆ ಬಹುದೊಡ್ಡ ಆರೋಪವೊಂದನ್ನ ಮಾಡಿದೆ. ಅದಲ್ಲದೇ ಕಾಂಗ್ರೆಸ್​​ ಬಿ ವೈ ವಿಜಯೇಂದ್ರ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ. ಬಿ.ವೈ ವಿಜಯೇಂದ್ರರವರು ಉತ್ತರ ನೀಡಬೇಕು ಎಂದು ಕಾಂಗ್ರೆಸ್​​
ಒತ್ತಾಯಿಸಿದೆ.

ಕಾಂಗ್ರೆಸ್​​ ಮಾಡಿದ ಆ ಆರೋಪವೇನು…?

ಬಿ .ಎಸ್.​​ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ವಿಜಯೇಂದ್ರ ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ 16 ರೂಮ್​​ ಇಟ್ಟುಕೊಂಡಿದ್ದರು. ಅದಕ್ಕೆ ಯಾರು ಹಣ ಪಾವತಿಸಿದ್ದರು? ಅದರ ಬಗ್ಗೆ ವಿಜಯೇಂದ್ರ ಅವರು ಬೆಳಕು ಚೆಲ್ಲಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನ ಪ್ರಶ್ನೆ ಮಾಡಿದೆ. ಇದೇ ವೇಳೆ ಮೈತ್ರಿ ಪಕ್ಷ ಜೆಡಿಎಸ್​​​ ರಾಜ್ಯಾರ್ಧಕ್ಷರನ್ನ ಬಿಡದ ಕಾಂಗ್ರೆಸ್​​ ಮಾಜಿ ಸಿಎಂ ಕುಮಾರಸ್ವಾಮಿ ಮೇಲೂ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ 6 ರೂಮ್​​ ಇಟ್ಟುಕೊಂಡಿದ್ದರು. ಅದರ ಬಗ್ಗೆಯೂ ಬೆಳಕು ಚೆಲ್ಲಬೇಕು ಎಂದು ಕಾಂಗ್ರೆಸ್​​ ವಕ್ತಾರ ಲಕ್ಷ್ಮಣ್​​ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯನ್ನ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​​ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡ್ತಾರ…!

ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ಬಳಿಕ ಸ್ವಪಕ್ಷದ ನಾಯಕರು ಸೇರಿ ಕಾಂಗ್ರೆಸ್​​ ಪಕ್ಷದವರು ಕೂಡ ಮುಗಿಬಿದ್ದಿದ್ದು, ಎಲ್ಲದಕ್ಕೂ ವಿಜಯೇಂದ್ರ ಉತ್ತರ ಕೊಡ್ತಾರ ಅನ್ನೋದನ್ನ ಕಾದು ನೋಡಬೇಕಿದೆ.

By admin

Leave a Reply

Your email address will not be published. Required fields are marked *

Verified by MonsterInsights