#Exclusive Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜ್ಯ

ಆಯೋಧ್ಯೆಯ ಶ್ರೀರಾಮನ ಮೂರ್ತಿ ಕಾಪಿನಾ..? ಇದು ಫ್ರೀಡಂ ಟಿವಿ ಎಕ್ಸ್ ಕ್ಲ್ಯೂಸಿವ್ ಸುದ್ದಿ !

ವರದಿ : ವಿಜಯ್ ಶಂಕರ್​, ಕೊರಟಗೆರೆ

ಫ್ರೀಡಂ ಟಿವಿ :  ಆಯೋಧ್ಯೆಯ ಶ್ರೀರಾಮನ ಮೂರ್ತಿ ಕಾಪಿನಾ..? ಇದು ಫ್ರೀಡಂ ಟಿವಿ ಎಕ್ಸ್ ಕ್ಲ್ಯೂಸಿವ್ ಸುದ್ದಿ ! ಅಯೋಧ್ಯೆಯಲ್ಲಿ ರಾಮಲಲ್ಲಾ ಪವಡಿಸಿದ್ದಾನೆ..ಐದು ಶತಮಾನಗಳ ಹೋರಾಟದ ಫಲವಾಗಿ ಮಂದಸ್ಮಿತನಾಗಿ ಪಟ್ಟಾಭೀಷೇಕ ಮುಗಿಸಿಕೊಂಡು ಕುಳಿತಿದ್ದಾನೆ..ಅವನನ್ನ ನೋಡೋಕೆ ಸಾಗರೋಪಾದಿಯಲ್ಲಿ ಜನ ಮುನ್ನುಗ್ಗಿ ಬರ್ತಿದ್ದಾರೆ.. ಅಭರಣವಿಲ್ಲದೆಯೇ ಕಂಗೊಳಿಸುತ್ತಿದ್ದ ರಾಮಮೂರ್ತಿಗೀಗ ಮೈ ತುಂಬಾ ಆಭರಣ ತೊಡಿಸಲಾಗಿದೆ. ಅವನಿಗೆ ಜೀವಕಳೆ ಬಂದಿದೆ.. ಇಂತಹ ಬಾಲರಾಮನನ್ನ ಕೆತ್ತಿದ್ದು, ನಮ್ಮದೇ ರಾಜ್ಯ ಸಾಂಸ್ಕೃತಿಕ ನಗರಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್.

ಅರುಣ್ ಯೋಗಿರಾಜ್ ಮೂರ್ತಿ ನೋಡಿದ ಪ್ರತಿಯೊಬ್ಬರೂ ಹುಬ್ಬೇರಿಸಿದ್ದು ಸತ್ಯ..ಅವರ ಕಲೆಯನ್ನ ಕೊಂಡಾಡಿದ್ದು ಸತ್ಯ.ಆದ್ರೆ ಇದೀಗ ಅರುಣ್ ಯೋಗಿರಾಜ್ ತಮ್ಮ ತಾತನನ್ನ ಕಾಪಿ ಮಾಡಿದ್ರಾ ಅನ್ನೋ ಪ್ರಶ್ನೆಯೊಂದು ಉದ್ಭವಿಸಿದೆ. ಇದಕ್ಕೆ ಕಾರಣ ಅರುಣ್ ಯೋಗಿರಾಜ್ ತಾತಾ ಬಸವರಾಜ್ ಕೆತ್ತಿರೋ ಆ ಹರಿಹರೇಶ್ವರ ಸ್ವಾಮಿಯ ಮೂರ್ತಿ.

ಹೌದು..ಹರಿಹರೇಶ್ವರನಿಗೂ, ಅರುಣ್ ಯೋಗಿರಾಜ್ ಕೆತ್ತಿರೋ ರಾಮಲಲ್ಲಾನಿಗೂ ಸಣ್ಣ ವ್ಯತ್ಯಾಸಗಳಷ್ಟೆ. ಮುಖಾರವಿಂದ.ಮುಖದಲ್ಲಿರುವ ಮಂದಸ್ಮಿತ ಕಿರುನಗು..ಹಾವ ಭಾವ ಎಲ್ಲವೂ ಸೇಮ್ ಟು ಸೇಮ್..ಇನ್ನು ಕೆತ್ತಿರುವ ಪ್ರಭಾವಳಿ, ಸ್ವಾಮಿಗೆ ತೊಡಿಸಿರುವ ಆಭರಣಗಳು, ಕೈಯಲ್ಲಿರುವ ಬಿಲ್ಲು ಬಾಣ, ಕಾಲಿನ ಖಡಗ, ಅಭರಣಗಳು ಪ್ರತಿಯೊಂದಕ್ಕೂ ಸಾಮ್ಯತೆ ಇದೆ. ಇನ್ನು ಡಿಫರೆನ್ಸ್ ಅಂದ್ರೆ ಹರಿಹರೇಶ್ವರನ ಒಂದು ಕಿವಿಯಲ್ಲಿ ನಾಗಭರಣ, ಇನ್ನೊಂದು ಕಿವಿಯಲ್ಲಿ ಕರ್ಣ ಕುಂಡಲ ಇದೆ..ಆದ್ರೆ ರಾಮನ ಎರಡೂ ಕಿವಿಗಳು ಒಂದೇ ರೀತಿಯಲ್ಲಿವೆ ಅಷ್ಟೆ.

ನಿಜ.ಅಂದಾಗೆ ಈ ಹರಿಹರೇಶ್ವರ ಸ್ವಾಮಿ ಮೂರ್ತಿ ಇರೋದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಹರಿಹರ ರೊಪ್ಪ ಗ್ರಾಮದಲ್ಲಿ..ಇಲ್ಲಿ ನೆಲೆಗೊಂಡಿರುವ ಹರಿ ಮತ್ತು ಹರ ಇಬ್ಬರನ್ನೂ ಒಂದಾಗಿಸಿ ಹರಿಹರೇಶ್ವರಸ್ವಾಮಿಯನ್ನ ಪ್ರತಿಷ್ಟಾಪನೆ ಮಾಡಲಾಗಿದೆ. 1975ರಲ್ಲಿ ಈ ಮೂರ್ತಿಯನ್ನ ಕೆತ್ತನೆ ಮಾಡಲಾಗಿದೆ. ಕೆತ್ತಿದ್ದು ಅರುಣ್ ಯೋಗಿರಾಜ್ ತಾತ ಬಸವರಾಜ್ ಆಗಿರೋದ್ರಿಂದ ರಾಮಲಲ್ಲಾ ಮೂರ್ತಿ ಕೆತ್ತನೆಯಲ್ಲಿಯೂ ತಾತನನ್ನ ಅನುಕರಣೆ ಮಾಡಿದ್ದಾರೆ ಅನ್ನೋದು ಎದ್ದು ಕಾಣುತ್ತಿದೆ. ಸಹಜ.ತಾತನಿಂದ ತಂದೆಗೆ ತಂದೆಯಿಂದ ಮಗನಿಗೆ ಬಳುವಳಿಯಾಗಿ ಬರುವ ಕಲೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ…ಅಯೋದ್ಯೆಯಲ್ಲಿರುವ ರಾಮನ ಮೂರ್ತಿಯಂತೆಯೇ ಇರುವ ಮೂರ್ತಿಯೊಂದು ತುಮಕೂರು ಜಿಲ್ಲೆ ಮಧುಗಿರಿಯ ಹರಿಹರ ರೊಪ್ಪ ಗ್ರಾಮದಲ್ಲಿದೆ ಅನ್ನೊದು ಅಚ್ಚರಿಯ ವಿಚಾರ.

ಒಟ್ಟಿನಲ್ಲಿ ಅಯೋಧ್ಯೆ ರಾಮನ ಮೂರ್ತಿಗೂ ಮುನ್ನವೇ ರಾಮನ ಮೂರ್ತಿಯನ್ನೇ ಹೋಲುವ ಮೂರ್ತಿಯೊಂದು ತುಮಕೂರು ಜಿಲ್ಲೆಯ ಏಕಶಿಲಾ ನಗರಿ ಮಧುಗಿರಿಯಲ್ಲಿರೋದು ಕಲ್ಪತರು ಜಿಲ್ಲೆಯ ಹೆಮ್ಮೆ.ರಾಮನನ್ನ ನೋಡೋದಿಕ್ಕೆ ಅಯೋಧ್ಯೆ ತುಂಬಾ ದೂರ ಅನ್ನೋರು, ನಮ್ಮ ರಾಜ್ಯದಲ್ಲೇ ಇರುವ ಮಧುಗಿರಿಯ ಹರಿಹರೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬಹುದು.. ಸಾಕ್ಷಾತ್ ಆಯೋಧ್ಯೆ ಶ್ರೀರಾಮನನ್ನ ಹರಿಹರೇಶ್ವರನಲ್ಲಿ ಕಂಡು ಕಣ್ತುಂಬಿಕೊಳ್ಳಬಹುದು.

Comments (0)

Your email address will not be published. Required fields are marked *

Back to top button