Wednesday, April 30, 2025
32 C
Bengaluru
LIVE
ಮನೆಸುದ್ದಿ48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ

48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ

ಮಧ್ಯಪ್ರದೇಶ : ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಇದರಲ್ಲಿ 360 ಮಂದಿ ಕನ್ನಡಿಗರೇ ಇದ್ದಾರೆ.

ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ-ವಿಧಾನಗಳು ಇಂದು ಬೆಳಗ್ಗೆ 6ರಿಂದಲೇ ಆರಂಭವಾಗಿದ್ದು ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ಮತ್ತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಬೆಳಗ್ಗೆ ಅರಣಿ ಮಥನದೊಂದಿಗೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ಮೊದಲ ದಿನ ಗಣಪತಿ ಹವನ, ಪೂಜೆ ಬಳಿಕ ತತ್ವ ಹವನ ನಡೆಯಲಿದೆ. ತತ್ವಕಲಶ ಪ್ರತಿಷ್ಠಾಪಿಸಿ, ಬೆಳಗ್ಗೆ 10ಕ್ಕೆ ಸ್ವತಃ ಪೇಜಾವರ ಶ್ರೀಗಳು ರಾಮಲಲ್ಲಾನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ದಿನಂಪ್ರತಿ 4 ದಿನಗಳ ಕಾಲ ತಲಾ 2 ಕುಂಡಗಳಲ್ಲಿ ತತ್ವ ಹವನ ನಡೆಯಲಿದೆ. ಜ.24 ರಿಂದ ಪ್ರತಿದಿನ ವಿವಿಧ ತಂತ್ರಗ್ರಂಥಗಳ ಮಹಾಹವನ ನೆರವೇರಲಿದೆ. ನವಗ್ರಹ, ಭೂವರಾಹ ಮಂತ್ರ, ಅಷ್ಟ ಮಹಾಮಂತ್ರ ಸೇರಿ 48 ದಿನ ವಿವಿಧ ಹವನಗಳು ನಡೆಯುತ್ತವೆ.ಬ್ರಹ್ಮಕಲಶಾಭಿಷೇಕ ಮಾ.10ರ ವರೆಗೆ 48 ದಿನ ನಿರಂತರವಾಗಿ ನಡೆಯಲಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments