ವರದಿ : ಕುಮಾರ್ ಗಂಗಾಪುರ
ಕೋಲಾರ : ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಸಮಯ ಸಮೀಪಿಸುತ್ತಿದ್ದು ದೇಶದಲ್ಲೇ ರಾಮ ಭಕ್ತರಿಗೆ ಮರೆಯಲಾಗದ ಕ್ಷಣ, ರಾಮಾಯಣದ ಕುರುಹುಗಳನ್ನು ಜೀವಂತವಾಗಿ ಇಟ್ಟುಕೊಂಡಿರುವ ಕ್ಷೇತ್ರ, ಸೀತಾಮಾತೆ ವನವಾಸ ಮಾಡಿದ ಕ್ಷೇತ್ರ, ಲವ-ಕುಶರು ಜನಿಸಿದ ಸ್ಥಳ ಅಷ್ಟೇ ಅಲ್ಲ ರಾಮ ಲಕ್ಷ್ಮಣರು ಲವ-ಕುಶರೊಟ್ಟಿಗೆ ಕಾಳಗ ಮಾಡಿದ ಸ್ಥಳ ತ್ರೇತಾಯುಗದಲ್ಲಿ ಆವಂತಿಕಾ ಕ್ಷೇತ್ರ ಎಂದೇ ಪ್ರಸಿದ್ದವಾಗಿರುವ ಕ್ರೇತ್ರ ಚಿನ್ನದ ನಾಡಿನ ಯಾತ್ರಾಸ್ಥಳವಾಗಿದೆ.
ರಾಮ ಜನಿಸಿದ್ದು ಅಯೋಧ್ಯೆಯಲ್ಲಾದ್ರೆ, ಶ್ರೀರಾಮನ ಮಕ್ಕಳು ಜನಿಸಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಕ್ಷೇತ್ರದಲ್ಲಿ ಈ ಗ್ರಾಮದಲ್ಲಿರುವ ಬೆಟ್ಟವನ್ನು ಸೀತಮ್ಮ ಬೆಟ್ಟ, ವಾಲ್ಮೀಕಿ ಆಶ್ರಮ ಎಂದು ಕರೆಯುವ ರಾಮಾಯಣದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟ ಇದಾಗಿದ್ದು ಅನೇಕ ಕುರುಹುಗಳನ್ನು ಇಲ್ಲಿ ಕಾಣಬಹುದು , ಆಗಿನ ಆವಂತಿಕಾ ಕ್ಷೇತ್ರವೇ ಇಂದಿನ ಆವಣಿ ಪುಣ್ಯ ಭೂಮಿ ಯಾಗಿದೆ, ಇಲ್ಲಿ ರಾಮನ ಮತ್ತು ಸೀತಾ ಮಾತೆಯ ಕೆಲವು ಕುರುಹುಗಳು ಇವೆ ಎಂದು ಹೇಳಲಾಗುತ್ತೆ. ಆವಣಿ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟವನ್ನು ಸೀತಮ್ಮ ಬೆಟ್ಟ, ವಾಲ್ಮೀಕಿ ಗುಹೆ ಎಂದು ಸಹ ಕರೆಯಲಾಗುತ್ತದೆ.
ಶ್ರೀರಾಮನನ್ನು ಲೋಕಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಆಶ್ರಮ ಇರುವುದು ಇದೇ ಆವಣಿಯಲ್ಲಿ ಎಂದು ಹೇಳಲಾಗುತ್ತಿದ್ದು ಸೀತಾಮಾತೆ ವನವಾಸಕ್ಕೆ ಬಂದಾಗ ಆಶ್ರಯ ಪಡೆದಂತ ಸ್ಥಳ ಈ ವಾಲ್ಮಿಕಿ ಆಶ್ರಮ ಎಂಬ ನಂಬಿಕೆ ಇದ್ದು ಪ್ರಮುಖವಾಗಿ ಲವ-ಕುಶರ ಜನ್ಮ ಸ್ಥಳವಾಗಿದ್ದು, ಲವ-ಕುಶರಿಗೆ ಹಾಲು ಕುಡಿಸುವ ಹಾಲಡಿ, ರಾಮ ಮತ್ತು ಲವಕುಶ ಕಾಳಗ ಮಾಡಿದ ಸ್ಥಳ ಎಂದು ಹೇಳಲಾಗುವ ಸ್ಥಳ ಪುರಾಣಗಳಿವೆ ರಾಮ ಮತ್ತು ಲವ-ಕುಶರ ಕಾಳಗ ಮುಗಿದ ನಂತರ ರಾಮ ಬಂದು ಸೀತೆಯನ್ನು ಕರೆದಾಗ ಸೀತಾ ಮಾತೆ ನಿರಾಕರಿಸಿ ಭೂಮಿಗೆ ಒಳಗೆ ಅಂತರ್ಮುಖಿಯಾದ ಸ್ಥಳವೆಂದು ಪುರಾಣ ಕಲ್ಪಿತ ಕಥೆಯಿದೆ ಮತ್ತು ಸ್ಥಳ ಪುರಾಣವು ಇಲ್ಲಿದೆ. ಇನ್ನು ಶ್ರೀರಾಮ ಚಂದ್ರ ಈ ಪ್ರದೇಶಕ್ಕೆ ಭೇಟಿ ನೀಡಿದ ಹಿನ್ನೆಲೆ ಇಲ್ಲಿ ಶ್ರೀರಾಮನಿಂದ ಪ್ರತಿಷ್ಠಾಪಿತವಾಗಿರುವ ರಾಮಲಿಂಗೇಶ್ವರ, ಲಕ್ಷಣ್ಮೇಶ್ವರ, ಭರತೇಶ್ವರ ಲಿಂಗವಿರುವ ಪುರಾತನ ದೇವಾಲಯ ಇಂದಿಗೂ ನೋಡಬಹುದಾಗಿದೆ.
ಜನವರಿ 22 ರಂದು ಅಯ್ಯೋಧೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಾಗುತ್ತಿದ್ದು, ಅಯೋಧ್ಯೆಗೂ ಮತ್ತು ಕೋಲಾರ ಜಿಲ್ಲೆಯ ಆವಣಿ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿದೆ ರಾಮ ಇಲ್ಲಿಗೆ ಬಂದು ಹೋಗಿರುವುದರಿಂದ ಆವಂತಿಕ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು ಇಂದು ಎಲ್ಲಡೆ ರಾಮನ ಜಪ ಜೋರಾಗಿ ನಡೆಯುತ್ತಿದ್ದು ಕೋಲಾರದ ಆವಣಿಯಲ್ಲಿ ಇಂದಿಗೂ ರಾಮಾಯಣ ಕಾಲದ ಇತಿಹಾಸವನ್ನು ಅಲ್ಲಿನ ಪ್ರತೀತಿಯನ್ನು ಜೀವಂತವಾಗಿರಿಸಿಕೊಂಡು ಬರಲಾಗಿದ್ದು ಸೀತಮ್ಮ ಬೆಟ್ಟದಲ್ಲಿ ಸೀತಾಮಾತೆ ಪ್ರತಿಷ್ಠಾಪನೆ ಮಾಡಿರುವ ಪಾರ್ವತಿ ದೇವಾಲಯ ಇಲ್ಲಿದೆ . ಸೀತಾಮಾತೆ ಲವ ಕುಶರಿಗೆ ಜನ್ಮ ನೀಡುವ ಸಮಯದಲ್ಲಿ ಪ್ರಸವ ವೇದನೆಯಿಂದ ಒರಳಾಡಿದ ಸ್ಥಳವನ್ನು ಇಂದಿಗೂ ನಾವು ಇಲ್ಲಿ ನೋಡಬಹುದು ಈ ಪ್ರದೇಶವನ್ನು ಹೊರಳು ಗುಂಡು ಎಂದು ಮಾಡಲಾಗಿದೆ ಇಲ್ಲಿ ಇಂದಿಗೂ ಮಹಿಳೆಯರು ಮಕ್ಕಳು ಇಲ್ಲಿ ಹೊರಳುವ ಮೂಲಕ ತಮ್ಮ ಕಷ್ಟಗಳನ್ನು ಈಡೇರಿಸಿಕೊಳ್ಳುತ್ತಾರೆ ಮಕ್ಕಳಾಗದ ಮಹಿಳೆಯರು ಇಲ್ಲಿಗೆ ಬಂದು ಬೆಟ್ಟದ ಮೇಲಿರುವ ಧನುಷ್ಕೋಟಿಯಲ್ಲಿ ಸ್ನಾನ ಮಾಡಿ ನಂತರ ಪಾರ್ವತಿ ದೇವಿಗೆ ಪೂಜೆ ಮಾಡಿದ್ರೆ ಮಕ್ಕಳಾಗುತ್ತದೆ ಅನ್ನೋ ನಂಬಿಕೆ ಜನರಲ್ಲಿದೆ.