Wednesday, April 30, 2025
24 C
Bengaluru
LIVE
ಮನೆUncategorizedಬೇರೆಯವರ ಮೇಲೆ ತಪ್ಪು ಹೊರೆಯುಸುವ ಪ್ರಯತ್ನ ಆಗ್ತಾ ಇದೆ – ಸಚಿವ ಪ್ರಲ್ಹಾದ್ ಜೋಶಿ

ಬೇರೆಯವರ ಮೇಲೆ ತಪ್ಪು ಹೊರೆಯುಸುವ ಪ್ರಯತ್ನ ಆಗ್ತಾ ಇದೆ – ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಚಂಡ ಗಾಳಿ ಬೀಸ್ತಾ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಅಮಿತಾ ಶಾ ಅವರ ಹಾವೇರಿ, ಧಾರವಾಡ ಸಮಾವೇಶ ಅದ್ಭುತವಾದ ಶಕ್ತಿ ಕೊಟ್ಟಿದೆ. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನೂ ಗೆಲ್ಲುವ ಭರವಸೆ ಇದೆ ಎಂದರು.

ನೇಹಾ ಕುಟುಂಬದವರು ಗೃಹ ಸಚಿವ ಅಮಿತ್ ಶಾ ಭೇಟಿ ಆಗಿದ್ದಾರೆ. ಸಿಐಡಿ ಮೇಲೆ ನಂಬಿಕೆ ಇಲ್ಲಾ ಅಂತಾ ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ. ತ್ವರಿತ ನ್ಯಾಯ ಬೇಕು ಅಂದಿದ್ದಾರೆ, ಸಿಬಿಐಗೆ ಕೊಡಿ ಅಂದಿದ್ದಾರೆ.ಕಠಿಣ ಶಿಕ್ಷೆ ಆರೋಪಿಗೆ ಆಗಬೇಕು ಅಂತಾ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಇನ್ನೂ ಇದೇ ವೇಳೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಕುರಿತು ಮಾತನಾಡಿದ ಅವರು,  ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಮಾಡ್ತಾ ಇದೆ. ಬೇರೆಯವರ ಮೇಲೆ ತಪ್ಪು ಹೊರೆಯುಸುವ ಪ್ರಯತ್ನ ಆಗ್ತಾ ಇದೆ. ತಮ್ಮ ಹಾಗೂ ಬಿಜೆಪಿ ಪ್ರಮುಖರ ಪ್ರಶ್ನೆಗೆ ರಾಜ್ಯ ಸರ್ಕಾರ, ಸಿಎಂ ಒಂದೇ ಒಂದು ಉತ್ತರ ಕೊಟ್ಟಿಲ್ಲ, ಪ್ರಜ್ವಲ್ ರೇವಣ್ಣನ ರಾಸಲೀಲೆ ವಿಡಿಯೋ ಕ್ಲಿಪ್ 21 ಕ್ಕೆ ಹೊರಗೆ ಬಂದರೆ. 28 ರವರಗೆ ಯಾಕೆ ಎಫ್ಐಆರ್ ಮಾಡಿಲ್ಲ? ಎಂದು ಪ್ರಲ್ಹಾದ್ ಜೋಶಿ ಹೇಳಿದರು.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments