ಮಂಡ್ಯ: ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬರೀ ಜಾತಿ-ಜಾತಿ ಎಂದು ಮಾತನಾಡುತ್ತಾರೆ. ಇವರ ಆಡಳಿತದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಮದ್ದೂರಲ್ಲಿ ಮಾತನಾಡಿದ ಅವರು, ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದ ಘಟನೆ ನಡೆದಿತ್ತು. ಈ ಘಟನೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬರೀ ಜಾತಿ-ಜಾತಿ ಎಂದು ಮಾತನಾಡುತ್ತಾರೆ. ಇವರ ಆಡಳಿತದಲ್ಲಿ ಹಿಂದೂಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ನಾವೇನು ಗಣೇಶನ ಹಬ್ಬವನ್ನು ದಿನಾಲೂ ಮಾಡುತ್ತಿದ್ದೇವೆಯೇ? ಒಂದು ದಿನ ಡಿಜೆ ಹಾಕಿದರೆ ತಪ್ಪೇನು? ಸಾರ್ವಜನಿಕ ರಸ್ತೆ ಯಾರ ಆಸ್ತಿಯೂ ಅಲ್ಲ. ತೆರಿಗೆದಾರರ ಹಕ್ಕಿನ ಭಾಗವಾಗಿದೆ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ಕೇವಲ ಎರಡು ವರ್ಷ. ಇನ್ಮೇಲೆ ಹತ್ತು ವರ್ಷ ನಮ್ಮದೇ ಹವಾ. ನಿನ್ನೆಯಷ್ಟೇ ಹೆಚ್‌ಡಿಕೆ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ನಾವು ಘಜ್ನಿ, ಬಾಬರ್ ದಾಳಿಗಳನ್ನು ನೋಡಿದ್ದೇವೆ. ಇನ್ಮೇಲೆ ಏನಿದ್ದರೂ ಹಿಂದೂಗಳದ್ದೇ ದರ್ಬಾರ್. ಸಿದ್ದರಾಮಯ್ಯ ಬೇಕಾದರೆ ಟೋಪಿ ಹಾಕಿಕೊಂಡು ಓಡಾಡಲಿ. ಆದರೆ ಮಂಡ್ಯದ ಜನರಿಗೆ ಟೋಪಿ ಹಾಕಲು ಬರಬಾರದು ಎಂದು ಎಚ್ಚರಿಕೆ ನೀಡಿದರು. ಧರ್ಮಸ್ಥಳ, ಚಾಮುಂಡೇಶ್ವರಿ, ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದಗಳನ್ನು ಉಲ್ಲೇಖಿಸಿ, ಇಂತಹ ಘಟನೆಗಳಿಗೆ ನಾವು ಇನ್ಮೇಲೆ ಪರವಾನಗಿ ಕೊಡುವುದಿಲ್ಲ,” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.