ಕಲಬುರಗಿ : ಎಟಿಎಂ ದರೋಡೆಕೋರರ ಮೇಲೆ ಬೆಳ್ಳಂ ಬೆಳಗ್ಗೆ ಕಲಬುರಗಿ ಪೊಲೀಸರಿಂದ ಗುಂಡಿನ ದಾಳಿ ಮಾಡಲಾಗಿದೆ. ಈ ಘಟನೆ ಕಲಬುರಗಿ ನಗರದ ಬೇಲೂರ ಕ್ರಾಸ್ ಬಳಿ ನಡೆದಿದೆ.
ಏ.9 ರಂದು ಕಲಬುರಗಿಯ ಪೂಜಾರಿ ಚೌಕ್ ಬಳಿ ಎಸ್ಬಿಐ ಎಟಿಎಂ ದರೋಡೆ ಮಾಡಿದ್ದ ಹರಿಯಾಣದ ಗ್ಯಾಂಗ್.ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ, ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಕಲಬುರಗಿ ಜಲ್ಲೆಯ ಸಬ್ ಅರ್ಬನ್ ಠಾಣೆಯ ಸಿಪಿಐ ಸಂತೋಷ್ ಹಾಗೂ ಪಿಎಸ್ಐ ಬಸವರಾಜ್ರಿಂದ ದರೋಡೆಕೊರರ ಮೇಲೆ ಫೈರಿಂಗ್ ನಡೆದಿದೆ.
ಹರಿಯಾಣ ಮೂಲದ ತಸ್ಲೀಂ ಹಾಗೂ ಶರೀಫ್ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೊರರ ಬಳಿ ಐ20 ಕಾರು ಇರುವುದಾಗಿ ಪತ್ತೆಯಾಗಿದೆ. ಫೈರಿಂಗ್ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಸ್ಥಳದಲ್ಲಿದ್ದರು.
ಘಟನೆಯಲ್ಲಿ ಪಿಎಸ್ಐ ಬಸವರಾಜ್ ಹಾಗೂ ಮೂವರು ಕಾನ್ಸ್ಟೆಬಲ್ಗಳಿಗೆ ಗಾಯವಾಗಿದೆ. ಬಂಧಿತ ದರೋಡೆಕೋರ ತಸ್ಲೀಂ ವಿರುದ್ದ 8 ಪ್ರಕರಣ ಹಾಗೂ ಶರೀಫ್ ಮೇಲೆ 3 ಪ್ರಕರಣ ದಾಖಲಾಗಿವೆ.
ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಟಿಎಂಗಳನ್ನೇ ದರೋಡೆ ಮಾಡ್ತಿದ್ದ ಗ್ಯಾಂಗ್ ಈಗ ಪೊಲೀಸ್ ಕಸ್ಟಡಿಯಲ್ಲಿ ಲಾಕ್ ಆಗಿದ್ದಾರೆ.