ತುಮಕೂರು: ರಾಜ್ಯದಲ್ಲಿ ಕುರ್ಚಿ ಕಾದಾಟದ ಚರ್ಚೆ ಮತ್ತೆ ಜೋರಾಗುತ್ತಿದ್ದು, ಬೆಳಗಾವಿಯ ಅಧಿವೇಶನ ಹೊತ್ತಲ್ಲಿ ಓಪನ್ ಸ್ಷೇಟ್ಮೆಂಟ್ ಬೇಡ ಎಂದು ಸಿಎಂ ಸಿದ್ದರಾಮಯ್ಯ ಪಕ್ಷದ ಸಚಿವರು ಹಾಗೂ ಶಾಸಕರಿಗೆ ಕಿವಿ ಮಾತು ಹೇಳಿದ್ದರು. ಇದೀಗ ಗೃಹ ಸಚಿವ ಪರಮೇಶ್ವರ್ ಪರ ಸ್ವಾಮೀಜಿ ಧ್ವನಿ ಎತ್ತಿದ್ದಾರೆ. ಪರಮೇಶ್ವರ್ ಅವರು ಅವರು ಸಿಎಂ ಆಗ್ಬೇಕು ಎಂದು ಅಟವಿ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಕುರ್ಚಿ ಕಾದಾಟದ ನಡುವೆಯೇ ದಲಿತ ಸಿಎಂ ಕೂಗು ಕೂಡ ಜೋರಾಗಿದೆ. ಇದರ ನಡುವೆ ಸಿಎಂ ಕುರ್ಚಿ ರಾಜಕಾರಣಕ್ಕೆ ಸ್ವಾಮೀಜಿಗಳು ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು. ಅವರಿಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದ್ರು. ಇದೀಗ ಪರಮೇಶ್ವರ್ ಪರ ಅಟವಿ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
ಹೈಕಮಾಂಡ್ ಕೆಂಡ ಹೊರ ಹಾಕಿದ್ರಿಂದ ಅವರ ಪಕ್ಷದವರೇ ಬೆನ್ನುಹತ್ತಿದ್ದಾರೆ. ಬೂದಿ ಮುಚ್ಚಿದ ಕೆಂಡ ಈಗ ಹೊರಗೆ ಬಂದಿದೆ. ಚಂಡಮಾರುತ ಗಾಳಿ ಬೀಸಿದ್ರೆ ಕೆಂಡ ಜೋರಾಗಿ ಹೊತ್ತಿ ಉರಿಯಲಿದೆ. ಆಯ್ಕೆ ಮಾಡಿ ತೀರ್ಮಾನ ಮಾಡಿದ್ರೆ ನಾವು ಏನೂ ಮಾಡೊಕ್ಕೆ ಬರೋದಿಲ್ಲ ಎಂದ್ರು. ಆದ್ರೆ ಒಂದು ಅವಕಾಶ ಗೃಹ ಸಚಿವರಿಗೂ ನೀಡ್ಬೇಕು, ಪರಮೇಶ್ವರ್ ಅವರನ್ನ ಸಿಎಂ ಮಾಡಿ ಎಂದು ಅಟವಿ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮೀಜಿ ಹೇಳಿದ್ದಾರೆ.


