ಕೋಲಾರ: ದ ಹೆಸರುವಾಸಿಯಾಗಿದ್ದ ಇಟಿಸಿಎಂ ಆಸ್ಪತ್ರೆಯು ಕೆಲ ವರ್ಷಗಳಿಂದ ನಾನಾ ಕಾರಣದಿಂದ ಮುಚ್ಚಲ್ಪಟ್ಟಿತ್ತು. ಇದೀಗ ಮತ್ತೆ ಪುನಾರಂಭವಾಗಿದೆ. ಮತ್ತೆ ಪುನಾರಂಭವಾಗಿರುವ ವಿಂಗ್ಸ್ ಇಟಿಸಿಎಂ ಆಸ್ಪತ್ರೆಗೆ ದೀಪ ಬೇಳಗುವ ಮೂಲಕ ಅಶ್ವಿನಿ ಪುನಿತ್ ರಾಜ್ ಕುಮಾರ್ ಚಾಲನೆ ನೀಡಿದ್ದಾರೆ.

ಸದ್ಯ ಈ ಹಾಸ್ಪಿಟಲ್ 1910 ರಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಪ್ರಾರಂಭಗೊಂಡಿತ್ತು. ಆದಾದ ಬಳಿಕ ಸತತವಾಗಿ ನೂತನ ಕಾರ್ಯದಲ್ಲಿ ಕೋಲಾರ ಸುತ್ತಾ ಮುತ್ತಾ ಗುರುತಿಸಿಕೊಂಡಿತ್ತು.

ಆದರೆ ಕೆಲವು ವರ್ಷಗಳಿಂದ ಆರೋಗ್ಯ ಸೇವೆಯಲ್ಲಿ ಅಲ್ಪಮಟ್ಟದ ಹಿನ್ನೆಡೆ ಸಾಧಿಸಿತ್ತು. ಈಗ ವಿಂಗ್ಸ್ ಗ್ರೂಪ್ ನಿಂದ ಮರು ಸ್ಥಾಪನೆಗೊಂಡು ವಿಂಗ್ಸ್ ಇಟಿಸಿಎಂ ಆಸ್ಪತ್ರೆ ಹೆಸರು ಪಡೆದುಕೊಂಡಿದೆ.