ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಎಸ್ ಎಂ ಕೃಷ್ಣ ಅವರದ್ದು ಪ್ರಮುಖ ಹೆಸರು. 43 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್ ಎಂ ಕೃಷ್ಣ ಅವರು ನಂತರ ಬಿಜೆಪಿಗೆ ಸೇರ್ಪಡೆಯಾದ್ರು. ಮುಖ್ಯಮಂತ್ರಿ, ರಾಜ್ಯಪಾಲರು, ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿ ಕರ್ನಾಟಕ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಖ್ಯಾತಿಗಳಿಸಿದ್ದ ಎಸ್ ಎಂ ಕೃಷ್ಣ ಅವರು ಎಲ್ಲಾ ಪಕ್ಷದವರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು. ಬೇರೆ ಬೇರೆ ಪಕ್ಷದಲ್ಲಿದ್ದರೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದರು. ಬೇರೆ ಬೇರೆ ಪಕ್ಷದವರ ಜೊತೆಗಿನ ಒಡನಾಟದ ಬಗ್ಗೆ ಕೃಷ್ಣ ಅವರು ತಮ್ಮ ಆತ್ಮಕತೆ ‘ಸ್ಮೃತಿ ವಾಹಿನಿ’ಯಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ. ಒಮ್ಮೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಸ್ ಎಂ ಕೃಷ್ಣ ಅವರ ಕಾಲಿಗೆ ಬಿದ್ದಿದ್ದರಂತೆ. ಆ ಸ್ವಾರಸ್ಯಕರವಾದ ಘಟನೆ ಬಗ್ಗೆ, ಎಸ್ ಎಂ ಕೃಷ್ಣ ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಕುಮಾರಸ್ವಾಮಿ ಕಾಲಿಗೆ ಬಿದ್ದ ಕತೆ -1994ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಜನತಾದಳ ಅಧಿಕಾರಕ್ಕೆ ಬಂತು. ಅನೇಕ ಗೊಂದಲದ ನಡುವೆ ದೇವೇಗೌಡರು. ಮುಖ್ಯಮಂತ್ರಿಯಾದರು. 1996ರಲ್ಲಿ ಲೋಕಸಭೆ ಚುನಾವಣೆ ಎದುರಾಯಿತು. ಒಂದು ದಿನ ಮಿತ್ರರಾದ ಎಚ್.ಎನ್. ನಂಜೇಗೌಡರು ಕರೆ ಮಾಡಿ ಇಂದು ನೀವು ನಮ್ಮ ಮನೆಗೆ ಊಟಕ್ಕೆ ಬರಬೇಕು. ಎಚ್.ಡಿ ದೇವೆಗೌಡರು ಬರುತ್ತಾರೆ’ ಎಂದರು. ಆಗ ನಂಜೇಗೌಡರು ಬಸವನಗುಡಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದರು. ಸಂಜೆ ಅವರ ಮನೆಗೆ ಹೋದೆ. ಸಮಯಕ್ಕೆ ಸರಿಯಾಗಿ ದೇವೇಗೌಡರೂ ಬಂದರು” ಎಂದು ಬರೆದುಕೊಂಡಿದ್ದಾರೆ.
ಕುಮಾರಸ್ವಾಮಿ ಎಸ್ಎಂ ಕೃಷ್ಣ ಕಾಲಿಗೆ ಬಿದ್ದಿದ್ದರಂತೆ…..!
RELATED ARTICLES