Tuesday, January 27, 2026
26.9 C
Bengaluru
Google search engine
LIVE
ಮನೆಜಿಲ್ಲೆಸರ್ಕಾರದ ವಿರುದ್ಧ ಅರವಿಂದ್​ ಬೆಲ್ಲದ್ ಗುಡುಗು

ಸರ್ಕಾರದ ವಿರುದ್ಧ ಅರವಿಂದ್​ ಬೆಲ್ಲದ್ ಗುಡುಗು

ಹುಬ್ಬಳ್ಳಿ: ಡಿಸಿಎಂ ಡಿಕೆಶಿ ಸಂವಿಧಾನ ಬದಲಾವಣೆ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ವಿಧಾನಸಭೆಯ ಪ್ರತಿಪಕ್ಷ ನಾಯಕ ಅರವಿಂದ್​ ಬೆಲ್ಲದ್​ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು,  ಕಾಂಗ್ರೆಸ್‌ನವರ ತಮ್ಮ ಸ್ವಾರ್ಥಕ್ಕಾಗಿ ಸಂವಿಧಾನ ಬದಲಾವಣೆ ಮಾಡುವುದು ಹೊಸದಲ್ಲ. ಈ ಹಿಂದೆ ಎಮರ್ಜೆನ್ಸಿ ಸಮಯದಲ್ಲಿ ಸಂವಿಧಾನ ಬದಲಾಯಿಸಿರುವುದು ಇದೇ ಕಾಂಗ್ರೆಸ್ ಎಂದು ಬೆಲ್ಲದ ಕಿಡಿ ಕಾರಿದರು. ಮುಸ್ಲಿಂ ಓಲೈಕೆ ರಾಜಕಾರಣ ಕಾಂಗ್ರೆಸ್ DNAದಲ್ಲಿಯೇ ಇದೆ. ಈಗ ಡಿಸಿಎಂ ಡಿಕೆಶಿ ಮುಸ್ಲಿಂರಿಗೋಸ್ಕರ ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಜಾತಿ ಆಧಾರದ ಮೇಲೆ ಮೀಸಲಾತಿ ಇದೆ, ಧರ್ಮಾಧಾರಿತ ಮೀಸಲಾತಿ ಇಲ್ಲ. ಇಂದಿನ ಡಿಕೆ ಶಿವಕುಮಾರವರ ಸಂವಿಧಾನ ಬದಲಾವಣೆ ಹೇಳಿಕೆ, ಅಂಬೇಡ್ಕರ್ ರವರ ಮೇಲೆ ಇರೋ ಗೌರವ ತೋರಿಸುತ್ತೆ. ನಮ್ಮ ಸಂವಿಧಾನದ ಮೇಲೆ ಡಿಕೆಶಿಗೆ ಎಷ್ಟು ಗೌರವ ಇದೆ ಅನ್ನೋದನ್ನು ಇಲ್ಲಿ ಕಾಣಬಹುದು. ಕಾಂಗ್ರೆಸ್‌ನ ಅಸಲಿ ಮುಖ ದರ್ಶನ ಜನರಿಗೆ ಈಗ ಗೊತ್ತಾಗುತ್ತಿದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿಯವರೂ ಸಂವಿಧಾನವನ್ನು ಓದ್ಕೊಂಡಿಲ್ಲ. ಬೈಬಲ್ ಓದಿಕೊಂಡವರು ಅವರು, ಬೈಬಲ್ ಹಿಡಿದು ಸಂವಿಧಾನ ಪುಸ್ತಕ ಎಂದು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಂವಿಧಾನ ಪುಸ್ತಕ ಎಂದು ಜನರನ್ನು ದಾರಿ ತಪ್ಪಿಸಿದ್ದರು..ರಾಹುಲ್ ಗಾಂಧಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ಇವರ ಗೌರವ ಬೈಬಲ್‌ಗೆ ಮಾತ್ರ. ಕಾಂಗ್ರೆಸ್‌ನ ಯಾರೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನದ ಪುಸ್ತಕವನ್ನು ಕಾಂಗ್ರೆಸ್ ಅಧಿಕಾರ ಪಡೆಯುವುದಕ್ಕೆ ಬಳಸಿಕೊಳ್ಳುತ್ತಲೇ ಬಂದಿದೆ. ಮುಸ್ಲಿಂ ಓಲೈಕೆಗಾಗಿ ಕಾಂಗ್ರೆಸ್ ಯಾವ ಹಂತಕ್ಕಾದ್ರೂ ಹೋಗುತ್ತದೆ ಎಂದು ಕಾಂಗ್ರೆಸ್​ ಮೇಲೆ ಅರವಿಂದ್ ಬೆಲ್ಲದ್ ಮಾತಿನ ಪ್ರಹಾರ ಮಾಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments