ಇತ್ತೀಚೆಗಷ್ಟೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ವಿವಾದ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು.. ಯಾರೋ ಕೆಲವರು ಕಿಡಿಗೇಡಿಗಳು ಮಣಿವಣ್ಣನ್ ಹೆಸ್ರಿಗೆ ಮಸಿ ಬಳಿಯೋಕೆ ಅಂತ ಟೆಲಿಗ್ರಾಂ ಗ್ರೂಪಿನಲ್ಲಿ ಸಂದೇಶ ರವಾನಿಸಿದ್ರು.
ಇನ್ನು ಇದೇ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಸ್ಪಷ್ಟನೆ ಕೂಡ ಕೂಟ್ಟಿದ್ರು. ಈ ವಿವಾದ ಪ್ರತಿಪಕ್ಷ ಮತ್ತು ಸಂಘ ಸಂಸ್ಥೆಗಳ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿವಾದ ಎದ್ದಿತ್ತು. ಅದೇನಪ್ಪ ಅಂದ್ರೆ, ಸರ್ಕಾರಿ ಶಾಲೆಗಳಿಗೆ ನಾಡಗೀತೆ ಕಡ್ಡಾಯ ಮಾಡಿದ ಆದೇಶ ಹೊರಬಿದ್ದಿತ್ತು. ಈ ಆದೇಶ ಹೊರ ಬೀಳುತ್ತಲೇ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಾಡಗೀತೆನಾ ಎಂದು ಟೀಕಿಸಿದ್ರು. ಇದರ ಬೆನ್ನಲ್ಲೇ ಸಚಿವ ಶಿವರಾಜ್ ತಂಗಡಗಿ, ಅದು ಕಣ್ತಪ್ಪಿನಿಂದ ಆಗಿರುವಂತದ್ದು, ಅಂತ ಸ್ಟೇಟ್ಮೆಂಟ್ ಕೊಟ್ಟಿದ್ರು.
ಅಲ್ಲದೇ ಆ ಆದೇಶದ ಹಿಂದೆಯೇ ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ. ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಸರ್ಕಾರಿ ಇಲಾಖೆಗಳು, ನಿಗಮಮಂಡಳಿ, ಪ್ರಾಧಿಕಾರ ಅರೆ ಸರ್ಕಾರಿ ಸಂಸ್ಥೆಗಳು, ಅಧಿಕೃತ ಕಾರ್ಯಕ್ರಮಗಳನ್ನ ಏರ್ಪಡಿಸುವ ಪ್ರಾರಂಭದಲ್ಲಿ ನಾಡಗೀತೆಯನ್ನ ಕಡ್ಡಾಯ ಹಾಡಬೇಕೆಂದು ಆದೇಶ ಹೊರಡಿಸಲಾಗಿದೆ.