ದೇಶ/ವಿದೇಶರಾಜ್ಯಸುದ್ದಿ

ಪಬ್‌ಜಿ ಗೇಮ್‌ಗೆ ಮತ್ತೊಂದು ಬಲಿ; ಆಡುತ್ತಿರುವಾಗಲೇ 300ಕ್ಕೇರಿದ ಬಿಪಿ

ಉತ್ತರ ಪ್ರದೇಶ: ಆನ್‌ಲೈನ್ ಗೇಮಿಂಗ್ ವ್ಯಸನವು ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಪಬ್‌ಜಿ ಗೇಮ್ ಆಡುತ್ತಿದ್ದ 22 ವರ್ಷದ ಯುವಕ ಮೊಹಮ್ಮದ್ ಕೈಫ್ ಎಂಬುವವರು ತೀವ್ರ ರಕ್ತದೊತ್ತಡದಿಂದಾಗಿ ಸಾವನ್ನಪ್ಪಿದ್ದಾರೆ.

ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರನಾಗಿದ್ದ ಕೈಫ್, ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ, ಪಬ್‌ಜಿ ಆಡುತ್ತಿದ್ದಾಗ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ, ಆತನ ರಕ್ತದೊತ್ತಡ 300ರ ಗಡಿ ದಾಟಿರುವುದು ಪತ್ತೆಯಾಗಿದೆ. ನಂತರ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಎರಡು ದಿನಗಳ ಹೋರಾಟದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ವೈದ್ಯರ ಪ್ರಕಾರ, ಸತತ ನಿದ್ರಾಹೀನತೆ ಮತ್ತು ಗೇಮಿಂಗ್‌ನಿಂದ ಉಂಟಾದ ತೀವ್ರ ಮಾನಸಿಕ ಒತ್ತಡವು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಮೆದುಳಿನ ರಕ್ತಸ್ರಾವ ಸಂಭವಿಸಿ ಯುವಕ ಸಾವನ್ನಪ್ಪಿದ್ದಾನೆ. ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾದ ಘಟನೆ ಮಾಸುವ ಮುನ್ನವೇ ಈ ದುರಂತ ಸಂಭವಿಸಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

Comments (0)

Your email address will not be published. Required fields are marked *

Back to top button