ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಶ್ರೀಮುರಳಿ, ಬರ್ತಡೇ ಪ್ರಯುಕ್ತ ‘ಪರಾಕ್’ ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಒಂದು ಕೈಯಲ್ಲಿ ಗನ್ ಹಿಡಿದು ಬೆನ್ನು ತೋರಿಸ್ತಿರುವ ಶ್ರೀ, ಬೆನ್ನಿಗೆ ಪಿಸ್ತೂಲ್ ಹಾಕಿ ಪ್ರತ್ಯಕ್ಷರಾಗಿದ್ದಾರೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ನಡಿ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದ್ದು ಮಾರ್ಚ್ನಿಂದ ಶೂಟಿಂಗ್ ಶುರುವಾಗಲಿದೆ. ರಾಮ್ ಚರಣ್ ನಟನೆಯ ಹೊಸ ಚಿತ್ರ ‘ಗೇಮ್ ಚೇಂಜರ್’ ರಿಲೀಸ್‌ಗೆ ರೆಡಿಯಾಗಿದೆ.
ಅದರಲ್ಲೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶನದ ಸಿನಿಮಾ ಅಂದರೆ ಅದರ ಕ್ರೇಜ್ ದೊಡ್ಡ ಮಟ್ಟದಲ್ಲಿ ಇರುತ್ತೆ. ಆದ್ರೆ ಈ ಸಿನಿಮಾ ಮಾತ್ರ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಾಕುವಲ್ಲಿ ವಿಫಲವಾಗಿದೆ. ಜನವರಿ 10ಕ್ಕೆ ಈ ಸಿನಿಮಾ ತೆರೆಗೆ ಬರಲಿದ್ದು, ಆದ್ರೆ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಮಾತ್ರ ಸೃಷ್ಟಿಯಾಗಿಲ್ಲ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಪೇಯ್ಡ್ ಪ್ರೀಮಿಯರ್‌ಗೆ ಮೊದಲ 48ಗಂಟೆಗಳಲ್ಲಿ ಜಸ್ಟ್ 1315 ಟಿಕೆಟ್ ಬುಕ್ ಆಗಿದ್ದು ಚಿತ್ರಕ್ಕೆ ಬಂಡವಾಳ ಹೂಡಿರೋ ದಿಲ್ ರಾಜುಗೆ ಟೆನ್ಷನ್ ಶುರುವಾಗಿದೆ.