Thursday, January 29, 2026
18 C
Bengaluru
Google search engine
LIVE
ಮನೆ#Exclusive NewsTop NewsAnant kumar hegde: ಇಷ್ಟು ವರ್ಷ ಗೆಲ್ಲಿಸಿದ್ದಕ್ಕೆ ನಿಮಗೆಲ್ಲ ನಮಸ್ಕಾರ - ಸಂಸದ ಅನಂತಕುಮಾರ್ ಹೆಗಡೆ

Anant kumar hegde: ಇಷ್ಟು ವರ್ಷ ಗೆಲ್ಲಿಸಿದ್ದಕ್ಕೆ ನಿಮಗೆಲ್ಲ ನಮಸ್ಕಾರ – ಸಂಸದ ಅನಂತಕುಮಾರ್ ಹೆಗಡೆ

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.. ಅಷ್ಟೇ ಅಲ್ಲ.. ಮುಂದಿನ ಶತಮಾನಗಳ ಕಾಲ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಭವಿಷ್ಯ ಹೇಳಿದ್ದಾರೆ.ಉತ್ತರಕನ್ನಡ ಜಿಲ್ಲೆ ಭಟ್ಕಳದ ಮಾವಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅನಂತ ಕುಮಾರ್ ಹೆಗಡೆ ಮಾತನಾಡಿದರು.

ಬಿಜೆಪಿಯಲ್ಲಿ ಹಲವರು ನನಗೆ ಟಿಕೆಟ್​ ಸಿಕ್ಕಿದೆ.. ನನ್ನ ಜೇಬಿನಲ್ಲಿದೆ ಎಂದು ಹೇಳಿಕೊಂಡು ಓಡಾಡ್ತಿದ್ದಾರೆ.ಆದರೆ, ನನ್ನ ಬಳಿಯಂತೂ ಟಿಕೆಟ್ ಇಲ್ಲ. ಬಿಜೆಪಿ ಅಭ್ಯರ್ಥಿ ಯಾರಾಗ್ರೂತಾರೆ ಎಂಬುದು ನನಗೂ ಗೊತ್ತಿಲ್ಲ. ಯಾರೇ ಸ್ಪರ್ಧಿಸಿದ್ರೂ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಅನಂತಕುಮಾರ್ ಹೆಗಡೆ ಕರೆ ನೀಡಿದರು.

ನನ್ನನ್ನು ಆರು ಬಾರಿ ಗೆಲ್ಲಿಸಿದ್ದಿರಾ.. ಇದಕ್ಕಿಂತ ಜಾಸ್ತಿ ಇನ್ನೇನು ಬೇಕು? ಮನುಷ್ಯನ ಆಸೆಗೂ ಒಂದು ಮಿತಿ ಇರಬೇಕು ಅಲ್ವಾ..? ಇಷ್ಟು ವರ್ಷಗಳ ಕಾಲ ಗೆಲ್ಲಿಸಿದಕ್ಕೆ ನಿಮಗೆಲ್ಲ ನಮಸ್ಕಾರ ಎಂದರು. ಈ ಮೂಲಕ ತಮಗೆ ಟಿಕೆಟ್ ಸಿಗುವುದು ಅನುಮಾನ ಎಂದು ಪರೋಕ್ಷವಾಗಿ ಅನಂತಕುಮಾರ್ ಹೆಗಡೆ ಹೇಳಿದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments