Top Newsಸುದ್ದಿ

ಬೀದಿಯಲ್ಲಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರ್ ಪತ್ತೆ ಹಚ್ಚಿದ ಅಮೆರಿಕ ವ್ಲೋಗರ್!

ಚೆನ್ನೈ: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಅನ್ನೋ ಮಾತು ಹೊಸದೇನಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ರಾಜಕೀಯ ಕೆಸರೆರೆಚಾಟಕ್ಕೂ ದಾರಿಮಾಡಿಕೊಟ್ಟಿದೆ. ಡಿಗ್ರಿ ಮಾಡಿ ಪಕೋಡ ಮಾರಿ ಅನ್ನೋ ಮಾತುಗಳು ಭಾರಿ ವೈರಲ್ ಆಗಿದೆ. ಆದರೆ ಇದೆಲ್ಲಕ್ಕಿಂತ ಭಿನ್ನವಾದ ಹಾಗೂ ಮಾದರಿಯಾದ ಘಟನೆಯೊಂದು ಇದೀಗ ಸದ್ದು ಮಾಡುತ್ತಿದೆ.  ಚೆನ್ನೈ ಬೀದಿ ಬದಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರನ್ನು ಅಮೆರಿಕ ವ್ಲೋಗರ್ ಪತ್ತೆ ಹಚ್ಚಿದ್ದಾನೆ.

ಅಮೆರಿಕದ ಖ್ಯಾತ ವ್ಲೋಗರ್ ಕ್ರಿಸ್ಟೋಫರ್ ಲಿವಿಸ್ ಭಾರತ ಪ್ರವಾಸದಲ್ಲಿ ಈ ವಿಶೇಷ ಘಟನೆಯನ್ನು ಸೆರೆ ಹಿಡಿದಿದ್ದಾನೆ. ಚೆನ್ನೈ ಡಿಸ್ಕವರಿ ಮಾಡಲು ಹೊರಟ ಲಿವಿಸ್ ಗೂಗಲ್ ಮ್ಯಾಪ್ ಮೂಲಕ ಬೀದಿ ಬದಿಯ ಚಿಕನ್ ಕಬಾಬ್ ಅಂಗಡಿದೆ ಬಂದಿದ್ದಾನೆ. ಸಾಲು ಸಾಲು ಸ್ಟ್ರೀಟ್ ಫುಡ್‌ಗಳ ನಡುವೆ ವ್ಲೋಗರ್ ಗೂಗಲ್ ಮ್ಯಾಪ್ ಮಾಡಿ ಈತನ ಬಳಿ ಬಂದಿದ್ದಾನೆ.

 

ಈ ಯುವಕನಿಂದ ಅಮೆರಿಕನ್ ವ್ಲೋಗರ್ ಇಂಪ್ರೆಸ್ ಆಗಿದ್ದಾನೆ. ಕಠಿಣ ಪರಿಶ್ರಮ, ಜೊತೆಗೆ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಿನಗೆ ಒಳ್ಳೆಯದಾಗಲಿ. ಆಲ್ ದಿ ಬೆಸ್ಟ್ ಎಂದು ಶುಭಹಾರೈಸಿ ಅಮೆರಿಕನ್ ವ್ಲೋಗರ್ ತೆರಳಿದ್ದಾನೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

Comments (0)

Your email address will not be published. Required fields are marked *

Back to top button