#Exclusive NewsTop Newsಸುದ್ದಿ

ಅಲ್ಲು ಅರ್ಜುನ್ ಬಂಧನ ಸರಿ: ಸಿಎಂ ರೇವಂತ್ ರೆಡ್ಡಿ

ಹೈದರಾಬಾದ್ : ನಟ ಅಲ್ಲು ಅರ್ಜುನ್ ಬಂಧಿಸಿದ್ದಕ್ಕೆ ಟೀಕೆಗೆ ಒಳಗಾಗಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮೌನ ಮುರಿದಿದ್ದು, ಬಂಧನವನ್ನು ಸಮರ್ಥಿಸಿ ಕೊಂಡಿದ್ದಾರೆ. ಶುಕ್ರವಾರ ತಮ್ಮ ವಿರುದ್ಧ ಕೇಳಿ ಬಂದ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ‘ಈ ಹಿಂದೆ ಸಲ್ಮಾನ್ ಖಾನ್, ಸಂಜಯ ದತ್ ಬಂಧನ ಆಗಿರಲಿಲ್ಲವೇ? ಅಲ್ಲು ಜನರನ್ನು ಹುಚ್ಚೆಬ್ಬಿಸುವ ವ್ಯಕ್ತಿ, ಅನುಮತಿ ಇಲ್ಲದೇ ಅಲ್ಲು ಬಂದಿದ್ದರಿಂದ 1 ಸಾವಾಗಿದೆ. ಅನೇಕರಿಗೆ ತೊಂದರೆಯಾಗಿದೆ. ಅದಕ್ಕೆ ಕೇಸು ದಾಖಲಿಸಲೇಬಾರದೇ? ಜನಸಾಮಾನ್ಯನಾದರೆ ಒಂದೇ ದಿನದಲ್ಲಿ ಬಂಧಿತ ನಾಗುತ್ತಿದ್ದ. ಸೆಲೆಬ್ರಿಟಿಗಳಿಗೆ ಬೇರೆ ಕಾನೂನು ಇಲ್ಲ. ಎಲ್ಲರಿಗೂ ಕಾನೂನು ಒಂದೇ’ ಎಂದರು. ‘ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸುತ್ತದೆ ಮತ್ತು ಪ್ರಕರಣದ ತನಿಖೆಯಲ್ಲಿ ಯಾರೂ ಮಧ್ಯಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

Comments (0)

Your email address will not be published. Required fields are marked *

Back to top button