Top Newsಸಿನಿಮಾಸುದ್ದಿ

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ರಿಲೀಸ್​ಗೆ ಕ್ಷಣಗಣನೆ ಆರಂಭ..

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಈ ಸಿನಿಮಾಗೆ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋಗಳನ್ನು ಇಡಲಾಗುತ್ತಿದೆ. ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈ ಸಿನಿಮಾನ ಅವರು ಅಭಿಮಾನಿಗಳ ಜೊತೆ ವೀಕ್ಷಣೆ ಮಾಡಲಿದ್ದಾರೆ. ಅದು ಎಲ್ಲಿ ಹಾಗೂ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.‘ಪುಷ್ಪ 2’  ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು (ಡಿಸೆಂಬರ್ 04) ರ ರಾತ್ರಿಯೇ ಮೊದಲ ಶೋ ಪ್ರದರ್ಶನಗೊಳ್ಳಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ಬಿಹಾರದ ಪಟ್ನಾನಲ್ಲಿ ಬಲು ಜೋರಾಗಿ ಪ್ರೀ ರಿಲೀಸ್ ಇವೆಂಟ್ ಮಾಡಿದ್ದರು. ಆ ನಂತರ ಚೆನ್ನೈ, ಕೇರಳದ ಕೊಚ್ಚಿ, ಮುಂಬೈ ಕೊನೆಗೆ ಹೈದರಾಬಾದ್​ನಲ್ಲಿಯೂ ಭಾರಿ ದೊಡ್ಡ ಪ್ರಚಾರದ ಇವೆಂಟ್​ಗಳನ್ನು ಚಿತ್ರತಂಡ ಮಾಡಿತ್ತು.

ತೆಲಂಗಾಣ, ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಇಂದು  ರಾತ್ರಿಯಿಂದಲೇ ಶೋ ಆರಂಭ ಆಗಲಿದೆ. ಅಲ್ಲು ಅರ್ಜುನ್ ಅವರು ಹೈದರಾಬಾದ್​ನ ಐಕಾನಿಕ್ ಥಿಯೇಟರ್ ‘ಸಂಧ್ಯಾ’ಗೆ ಭೇಟಿ ನೀಡಲಿದ್ದಾರೆ. ಅವರು ಒಮ್ಮೆ ಭೇಟಿ ನೀಡಿ ಅಭಿಮಾನಿಗಳನ್ನು ಖುಷಿಪಡಿಸಲಿದ್ದಾರೆ. ಅಲ್ಲು ಅರ್ಜುನ್ ಜೊತೆ ಇನ್ನೂ ಯಾವೆಲ್ಲ ಸೆಲೆಬ್ರಿಟಿಗಳು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲು ಅರ್ಜುನ್ ಅವರು ಎಲ್ಲಿ ಕಾಣಿಸಿಕೊಂಡರೂ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಈಗ ಅವರು ಥಿಯೇಟರ್ ಬಳಿ ಬಂದರೆ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ಬರೋದು ಪಕ್ಕಾ. ಹೀಗಾಗಿ ಅವರು ಆಗಮಿಸೋ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ಕೊಡಲು ನಿರ್ಧರಿಸಲಾಗಿದೆ.

 

Comments (0)

Your email address will not be published. Required fields are marked *

Back to top button