ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ ಇದೇ ಡಿಸೆಂಬರ್ 5ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಕುರಿತು ಏನಾದರೂ ಅಪ್‌ಡೇಟ್ ಸಿಗಲಿ ಎಂದು ನೋಡುತ್ತಿದ್ದ ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಟ್ರೈಲರ್ ಇದೇ ನವೆಂಬರ್ 17ರಂದು ಸಂಜೆ 6:03ಕ್ಕೆ ರಿಲೀಸ್ ಆಗಲಿದೆ. ಹಾಗಂತ ಖುದ್ದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹಳಿದ್ದಾರೆ . ಈ ಮೂಲಕ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.
ಇನ್ನೂ ‘ಪುಷ್ಪ 2’ ಚಿತ್ರಕ್ಕೆ ಮತ್ತೊರ್ವ ಕನ್ನಡತಿಯ ಎಂಟ್ರಿಯಾಗಿದೆ. ಭರಾಟೆ ಬ್ಯೂಟಿ ಶ್ರೀಲೀಲಾ ‘ಪುಷ್ಪ 2’ರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆ (ನ.10) ನಟಿಯ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯದಲ್ಲೇ ಶ್ರೀಲೀಲಾ ಐಟಂ ಸಾಂಗ್ ರಿಲೀಸ್ ಬಗ್ಗೆಯೂ ಅಪ್‌ಡೇಟ್ ಸಿಗಲಿದೆ.

ಇನ್ನೂ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


