
ಪುಷ್ಪ ದಿ ರೂಲ್ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ದಾಖಲೆಯತ್ತ ಮುನ್ನುಗುತಿದೆ. ಅಲ್ಲು ಅರ್ಜುನ್ ಅವರ ಮಗ ಅಲ್ಲು ಅಯಾನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ. ಅಪ್ಪನಿಗಾಗಿ ಮಗ ಪತ್ರ ಬರೆದಿದ್ದಾನೆ. ಸ್ವತಃ ಮಗನೇ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ ಅಲ್ಲು. ತಮ್ಮ ತಂದೆಯ ಸಾಧನೆಗಳ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಮಗ ಅಯಾನ್ ವ್ಯಕ್ತಪಡಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಗ ಅಪ್ಪನನ್ನು “ವಿಶ್ವದ ಶ್ರೇಷ್ಠ ನಟ” ಎಂದು ಕರೆದಿದ್ದಾನೆ. ಪುಷ್ಪ ದಿ ರೂಲ್ ಕೇವಲ ಚಲನಚಿತ್ರವಲ್ಲ. ಆದರೆ ಅವರ ಕಲೆಯ ಮೇಲಿನ ಪ್ರೀತಿಯ ಪ್ರತಿಬಿಂಬವಾಗಿದೆ. “ಪುಷ್ಪ ಅಂದರೆ ಹೂವು ಅಂದುಕೊಂಡಿದ್ದೀರಾ? ಅದು ಬೆಂಕಿ. ಎಂದು ಬರೆದಿದ್ದಾನೆ. ಈ ಸಿನಿಮಾಗಾಗಿ ಅಲ್ಲು ಅರ್ಜುನ್ ನೀಡಿದ ಸಮಯ, ಸಮಪರ್ಣೆ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾನೆ ಅಯಾನ್.
ಅಲ್ಲು ಅರ್ಜುನ್ ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, “ನನ್ನ ಮಗ ಅಯಾನ್ ಪತ್ರ ನನ್ನ ಹೃದಯ ಮುಟ್ಟಿದೆ. ಇದುವರೆಗಿನ ನನ್ನ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಅಂತಹ ಪ್ರೀತಿಯನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ. ಅವನು ಇನ್ನೂ ಚಿಕ್ಕವನಾಗಿದ್ದರಿಂದ ಕೆಲವು ಉತ್ಪ್ರೇಕ್ಷೆಗಳ ಮಾತಿಗೂ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.
View this post on Instagram
ನಟ ಮತ್ತು ತಂದೆಯಾಗಿ ಅಲ್ಲು ಅರ್ಜುನ್ ತುಂಬ ಗ್ರೇಟ್ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನಟ ವಿಜಯ್ ದೇವರಕೊಂಡ ಉಡುಗೊರೆಯಾಗಿ ನೀಡಿದ ಡೆನಿಮ್ ಜಾಕೆಟ್ ಅನ್ನು ಧರಿಸಿರುವ ಚಿತ್ರವನ್ನು ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ.
ವಿಜಯ್ ಅವರ ಬಟ್ಟೆ ಬ್ರ್ಯಾಂಡ್ ರೌಡಿಯ ಜಾಕೆಟ್ ಹಿಂಭಾಗದಲ್ಲಿ “ಪುಷ್ಪಾ” ಎಂಬ ಪದವನ್ನು ಹೊಂದಿದೆ. ಕನ್ನಡಿಯ ಮುಂದೆ ತನ್ನ ಸಹಿ ಸ್ಟೈಲಿಶ್ ಅವತಾರದಲ್ಲಿ ನಿಂತ ಅಲ್ಲು ಅರ್ಜುನ್ ವಿಜಯ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, “ಧನ್ಯವಾದ ನನ್ನ ಸ್ವೀಟೆಸ್ಟ್ ಬ್ರದರ್ ಎಂದು ಬರೆದುಕೊಂಡಿದ್ದಾರೆ. ಸುಕುಮಾರ್ ನಿರ್ದೇಶನದ ಮತ್ತು ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಸಹ-ನಟರಾಗಿ, ಪುಷ್ಪ ದಿ ರೂಲ್ ಡಿಸೆಂಬರ್ 5 ರಂದು ಬಿಡುಗಡೆಯಾಗಿದೆ.




