ಬೆಂಗಳೂರು: ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಇದೀಗ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್.ಆರ್ ನಗರ ನಿವಾಸದಿಂದ ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಪವಿತ್ರ ಗೌಡ ಅವರನ್ನು ವಿಚಾರಣೆಗೆಂದು ಕರೆತಂದಿದ್ದರು. ಬಳಿಕ ಪೊಲೀಸರು ಪವಿತ್ರ ಗೌಡರನ್ನು ಅರೆಸ್ಟ್ ಮಾಡಲಾಗಿದೆ ಎ೦ಬ ಮಾಹಿತಿ ಲಭಿಸಿದೆ.
ರೇಣುಕಾ ಪ್ರಸಾದ್ ಅವರು ಪವಿತ್ರ ಗೌಡಗೆ ಅಶ್ಲೀಲ ಮೆಸ್ಸೇಜ್ ಮಾಡ್ತಿದ್ದರು. ರೇಣುಕಾ ಸ್ವಾಮಿಯ ಕೊಲೆಗೆ ಒಳಸಂಚಿನ ಆರೋಪದಡಿ ಅವರನ್ನು ಬಂಧಿಸಿದ್ರೆ, ಇತ್ತ ದರ್ಶನ್ ಸೇರಿದಂತೆ 10 ಮಂದಿ ಸಹಚರರನ್ನು ಅರೆಸ್ಟ್ ಮಾಡಲಾಗಿದೆ.ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದೆ. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ನಡೆದಿದೆ ಎಂದು ವರದಿ ಆಗಿದೆ.


