Tuesday, September 9, 2025
21.8 C
Bengaluru
Google search engine
LIVE
ಮನೆ#Exclusive NewsTop Newsಮಲ್ಲಿಗೆ ಹೂವು ಇಟ್ಕೊಂಡಿದ್ದ ನಟಿ ನವ್ಯಾ ನಾಯರ್​ ಗೆ 1.14 ಲಕ್ಷ ರೂ. ದಂಡ

ಮಲ್ಲಿಗೆ ಹೂವು ಇಟ್ಕೊಂಡಿದ್ದ ನಟಿ ನವ್ಯಾ ನಾಯರ್​ ಗೆ 1.14 ಲಕ್ಷ ರೂ. ದಂಡ

ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆ ಮುಡಿದಿದ್ದ ಕಾರಣ 1.14 ಲಕ್ಷ ದಂಡ ಕಟ್ಟಿದ್ದಾರೆ. ಮಲಯಾಳಂ ನಟಿ ನವ್ಯಾ ನಾಯರ್ ಅವರು ಮಲ್ಲಿಗೆ ಒಯ್ಯುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಮಾಡಿದ ನಂತರ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಸುಮಾರು 1.14 ಲಕ್ಷ ದಂಡ ವಿಧಿಸಲಾಗಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಮೇಲ್ಬೋರ್ನ್​ನಲ್ಲಿ ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಶನ್ ಓಣಂ ಹಬ್ಬ ಆಚರಣೆಯನ್ನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ನಟಿ ನವ್ಯಾ ನಾಯರ್ ಅವರನ್ನ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹೀಗಾಗಿ ಕೇರಳದ ಕೊಚ್ಚಿಯಿಂದ ನವ್ಯಾ ನಾಯರ್​, ಆಸ್ಟ್ರೇಲಿಯಾಗೆ ವಿಮಾನ ಪ್ರಯಾಣ ಮಾಡಿದ್ದರು.

ವಿಮಾನ ಬೋರ್ಡಿಂಗ್ ಮೊದಲು ನವ್ಯಾ ನಾಯರ್ ತಂದೆ, ಓಣಂ ಹಬ್ಬದ ಆಚರಣೆಗೆ ತೆರಳುತ್ತಿರುವ ಕಾರಣ ಮಲ್ಲಿಗೆ ಮುಡಿದು ತೆರಳುವುದು ಅತ್ಯವಶ್ಯಕ ಎಂದು ಹೇಳಿದ್ದಾರೆ. ಜೊತೆಗೆ ಜಾಜಿ ಮಲ್ಲಿಗೆಯನ್ನು ನವ್ಯಾ ನಾಯರ್‌ಗೆ ನೀಡಿದ್ದಾರೆ. ಹೀಗಾಗಿ ನಟಿ ನವ್ಯಾ ಹೂವುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್ ಏರ್‌ಪೋರ್ಟ್‌ಗೆ ಬಂದಿಳಿದ್ದಾರೆ.

ಆದ್ರೆ ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಆದರೆ ನಟಿ ನವ್ಯಾ ನಾಯರ್ ಯಾವುದೇ ಮಾಹಿತಿ ನೀಡದೆ ಮಲ್ಲಿಗೆ ಹೂವನ್ನ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಬರೋಬ್ಬರಿ 1.14 ಲಕ್ಷ ದಂಡ ಕಟ್ಟಿದ್ದಾರೆ. ಈ ಬಗ್ಗೆ ಸ್ವತಃ ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments