ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿ ಕೀರ್ತಿ ಸುರೇಶ್ 15 ವರ್ಷಗಳ ಕಾಲ ಪ್ರೀತಿಸಿದ್ದ ಆಂಟೋನಿ ಜೊತೆ ಹಸೆಮಣೆ ಏರಿದ್ರು. ಡಿಸೆಂಬರ್ 12 ರಂದು ಗೋವಾದಲ್ಲಿ ನಡೆದ ಕೀರ್ತಿ ಸುರೇಶ್ ಡೆಸ್ಟಿನೇಷನ್ ವೆಡ್ಡಿಂಗ್ ಸೌತ್ ಸಿನಿಮಾ ಇಂಡಸ್ಟ್ರಿಯ ಅನೇಕ ನಟ-ನಟಿಯರು ಕೂಡ ಭಾಗಿಯಾಗಿದ್ರು. ನಟ ವಿಜಯ್, ತ್ರಿಶಾ ಹಾಗೂ ನಿರ್ದೇಶಕ ಅಟ್ಲಿ ಕೂಡ ಕೀರ್ತಿ ಸುರೇಶ್ ಮದುವೆಯಲ್ಲಿ ಕಾಣಿಸಿಕೊಂಡ್ರು.
ತಮ್ಮ ಮದುವೆಯಲ್ಲಿ ಭಾಗಿಯಾಗಿದ್ದ ನಟ, ರಾಜಕಾರಣಿ ದಳಪತಿ ವಿಜಯ್ ಫೋಟೋವನ್ನು ನಟಿ ಕೀರ್ತಿ ಸುರೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಕನಸಿನ ಮದುವೆಗೆ ನನ್ನ ಕನಸಿನ ಐಕಾನ್ ಸ್ಟಾರ್ ಬಂದು ಶುಭಕೋರಿದ್ರು ಹೆಚ್ಚು ಖುಷಿ ನೀಡಿದೆ ಎಂದು ಕೀರ್ತಿ ಸುರೇಶ್ ಬರೆದುಕೊಂಡಿದ್ದಾರೆ.
ನಟ ವಿಜಯ್ ಅವರ ಟಿವಿಕೆ ಪಕ್ಷದ ಸೋಶಿಯಲ್ ಮೀಡಿಯಾ ಪೇಜ್ನಲ್ಲೂ ಈ ಫೋಟೋಗಳನ್ನು ಶೇರ್ ಮಾಡಲಾಗಿದೆ. ದಳಪತಿ ಇನ್ ಕೀರ್ತಿ ಸುರೇಶ್ ವೆಡ್ಡಿಂಗ್ ಎಂದು ಟೈಟಲ್ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೀರ್ತಿ ಸುರೇಶ್, ನಟ ವಿಜಯ್ ಹಾಗೂ ನಿರ್ದೇಶಕ ಅಟ್ಲೀಗೆ ಆಪ್ತರಾಗಿದ್ದಾರೆ.