ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಇದೀಗ ದರ್ಶನ್ (Darshan) ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅಲ್ಲಿ ಕಷ್ಟಪಡ್ತಿರೋದು ನೋಡಿದ್ರೆ ತುಂಬಾನೇ ನೋವಾಗುತ್ತದೆ ಎಂದು ಗಿರಿಜಾ ಲೋಕೇಶ್ ಕಣ್ಣೀರಿಟ್ಟಿದ್ದಾರೆ. ನಾನೇನು ಹೇಳಲಿ. ದರ್ಶನ್ ಈಗ ಕಷ್ಟಪಡ್ತಿರೋದು ನೋಡಿದ್ದರೆ ತುಂಬಾನೇ ನೋವಾಗುತ್ತದೆ. ಆದಷ್ಟು ಬೇಗ ಇದರಿಂದ ಹೊರಬರಲಿ ಎಂದು ಆಶಿಸುತ್ತೇನೆ. ದೇವರಲ್ಲಿ ಬೇಡಿಕೊಳ್ಳುತ್ತೇನೆ. ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ. ನಾವೇನು ಮಾತನಾಡಬಾರದು. ಯಾರು ತಪ್ಪು ಮಾಡಿದ್ದಾರೋ ಏನು ಎಂಬುದು ಗೊತ್ತಿಲ್ಲ. ಪೊಲೀಸರು ಮತ್ತು ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದಕ್ಕೆ ನಾವು ತಲೆಬಾಗಬೇಕು ಎಂದು ಗಿರಿಜಾ ಲೋಕೇಶ್ ಮಾತನಾಡಿದ್ದಾರೆ. 14 ವರ್ಷದಿಂದ ದರ್ಶನ್ ನೋಡಿದ್ದೀನಿ. ತುಂಬಾ ಮುಗ್ಧ ಹುಡುಗ ಎಂದು ಮಾತನಾಡುತ್ತಾ ಹಿರಿಯ ನಟಿ ಕಣ್ಣೀರಿಟ್ಟಿದ್ದಾರೆ. ಈ ಸಂದರ್ಭ ನೋಡಿದ್ರೆ ಕನಸಾಗಿರಬಾರದಾ ಅನಿಸುತ್ತಿದೆ. ತಪ್ಪು ಯಾವುದೇ ವ್ಯಕ್ತಿ ಮಾಡಿದ್ರೂ ಶಿಕ್ಷೆ ಅನುಭವಿಸಲೇಬೇಕು. ಅದು ನಾನು ಆಗಿದ್ರೂ ಕೂಡ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ನಟಿ ಮಾತನಾಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com